ಮೈಸೂರು

ಶಾಸಕ ಜಿ.ಟಿ. ದೇವೇಗೌಡ ನಿವಾಸಕ್ಕೆ ಹೆಚ್ ಡಿಕೆ ಭೇಟಿ : ಸಾಂತ್ವನ

ಮೈಸೂರು,ಮೇ.17:- ಶಾಸಕ‌ ಜಿ ಟಿ ದೇವೇಗೌಡ ಅವರ ಮೊಮ್ಮಗಳು ಮೃತಪಟ್ಟ ಹಿನ್ನೆಲೆಯಲ್ಲಿ ಜಿ ಟಿ ದೇವೇಗೌಡರ ನಿವಾಸಕ್ಕೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭೇಟಿ ನೀಡಿ ಸಾಂತ್ವನ ಹೇಳಿದರು.

ಮೈಸೂರು ತಾಲ್ಲೂಕು ಗುಂಗ್ರಾಲ್ ಛತ್ರ ಗ್ರಾಮದ ನಿವಾಸಕ್ಕೆ ಭೇಟಿ ನೀಡಿ ಶಾಸಕ ಜಿ ಟಿ ದೇವೇಗೌಡ,ಕೆ.ಲಲಿತಾ ಜಿ.ಡಿ.ಹರೀಶ್ ಗೌಡರಿಗೆ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಶಾಸಕರಾದ ಸಾ ರಾ ಮಹೇಶ್, ಪುಟ್ಟರಾಜು, ಕೆ ಮಹದೇವ್, ಡಿ.ಸಿ.ತಮ್ಮಣ್ಣ, ಬಾಲಕೃಷ್ಣ, ಅಶ್ವಿನ್ ಕುಮಾರ್, ದಿನೇಶ್ ಗೂಳಿಗೌಡ, ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಹೆಚ್ ಡಿ ಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ಮುಖಂಡರು ಸಾಥ್ ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: