
ಮೈಸೂರು
ನಿರಂತರ ಸುರಿಯುತ್ತಿರುವ ಮಳೆಗೆ ಏರಿದ ತರಕಾರಿ ಬೆಲೆ
ಮೈಸೂರು,ಮೇ.17: – ಕಳೆದ ಐದಾರು ದಿನಗಳಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ನಿರಂತರ ಮಳೆ ಸುರಿಯುತ್ತಿದೆ. ಮಳೆ ಹಿನ್ನೆಲೆಯಲ್ಲಿ ವಿವಿಧ ತರಕಾರಿಗಳ ಲಭ್ಯತೆ ಕಡಿಮೆಯಾಗಿದ್ದು, ಬೆಲೆ ನಿರಂತರವಾಗಿ ಏರಿಕೆ ಕಾಣುತ್ತಿದೆ. ಮೈಸೂರಿನಲ್ಲಿಯೂ ಬೀನ್ಸ್, ಕ್ಯಾರೆಟ್, ಟೊಮೆಟೊ ದರ ದಿನೇದಿನೇ ಹೆಚ್ಚಾಗುತ್ತಿದೆ.
ಒಂದು ಕೆಜಿ ತರಕಾರಿ ಬೆಲೆಯು 40ರಷ್ಟು ಹೆಚ್ಚಾಗಿದೆ. ಮದುವೆ, ಶುಭ ಸಮಾರಂಭ ನಡೆಸುವವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಮಳೆ ಆರ್ಭಟ ಮುಂದುವರಿದರೆ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಹೊಲ, ಗದ್ದೆಗಳು ಕೆರೆಯಂತಾಗುತ್ತಿರುವ ಕಾರಣ ಕೊಯ್ದು ಮಾಡಲು ಸಾಧ್ಯವಾಗುತ್ತಿಲ್ಲ. ಹೊಲದಲ್ಲಿ ಬೆಳೆದಿರುವ ತರಕಾರಿ, ಹಣ್ಣುಗಳನ್ನು ಮಾರುಕಟ್ಟೆಗೆ ತರಲು ಕಷ್ಟವಾಗುತ್ತಿದೆ. ತರಕಾರಿ ಬೆಲೆ ಕೇಳಿ ಗ್ರಾಹಕರು ತಲೆ ಮೇಲೆ ಕೈ ಇಟ್ಟುಕೊಳ್ಳುವಂತಾಗಿದೆ.
ಕರ್ನಾಟಕದ ಬಹುತೇಕ ನಗರ, ಪಟ್ಟಣಗಳಲ್ಲಿ ತರಕಾರಿಗಳ ಬೆಲೆ ಹೀಗಿದೆ, ಬೀನ್ಸ್ -80 ರೂ ಕ್ಯಾರೆಟ್ -80 ರೂ ಬಿಟ್ ರೋಟ್ -30ರೂ ಕ್ಯಾಪ್ಸಿಕಮ್ -60 ರೂ ನವಿಲುಕೋಸು -40 ರೂ ಬೆಂಡೆಕಾಯಿ -30 ರೂ ಶುಂಟಿ -80 ರೂ ಮೆಣಸಿನಕಾಯಿ -80ರೂ ಟೋಮಾಟೋ -80ರೂ ಮೂಲಂಗಿ -30ರೂ ಈರುಳ್ಳಿ -20ರೂ ಬದನೆಕಾಯಿ -40 ರೂ ಕೊತ್ತಂಬರಿ ಸೊಪ್ಪು 40ರೂ ಏರಿಕೆ ಕಂಡಿದೆ. (ಕೆ.ಎಸ್,ಎಸ್.ಎಚ್)