ಕರ್ನಾಟಕಪ್ರಮುಖ ಸುದ್ದಿಮೈಸೂರು

ದೇವರಾಜ ಮಾರುಕಟ್ಟೆ ಮರುನಿರ್ಮಾಣಕ್ಕೆ ತಜ್ಞರ ಸಲಹೆ ಕೇಳಿದ್ದೇವೆ: ಸಿಎಂ

ದೇವರಾಜ ಮಾರುಕಟ್ಟೆ ಪುನರ್ ನಿರ್ಮಾಣ ವಿಚಾರದಲ್ಲಿ ತಜ್ಞರ ಅಭಿಪ್ರಾಯ ಪಡೆದು ನಿರ್ಧಾರಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮಂಗಳವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪುನರ್ ನಿರ್ಮಾಣ ಕಾರ್ಯದಲ್ಲಿ ಸಲಹೆ ನೀಡುವಂತೆ ತಜ್ಞರಿಗೆ ಕೋರಲಾಗಿದೆ. ವರದಿ ಬಂದ ನಂತರ ಪರಿಶೀಲನೆ ನಡೆಸಿ ನಿರ್ಧಾರಕ್ಕೆ ಬರಲಾಗುವುದು. ಜಿಲ್ಲಾಡಳಿತ ಚೆನ್ನೈ ನ ಐಐಟಿ ಮತ್ತು ಬೆಂಗಳೂರಿನಿಂದ ನುರಿತ ತಜ್ಞರನ್ನ ಕರೆಸಿ ವರದಿ ಪಡೆಯಲಿದೆ. ಹಳೆಯ ಕಟ್ಟಡದ ಮಾದರಿಯಲ್ಲಿಯೇ, ಪಾರಂಪರಿಕ ವಿನ್ಯಾಸ ಉಳಿಸಿಕೊಳ್ಳಲು ಶ್ರಮಿಸಲಾಗುವುದು ಎಂದರು. ಲ್ಯಾನ್ಸ್ ಡೌನ್ ಕಟ್ಟಡಕ್ಕೂ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಶೀಘ್ರದಲ್ಲಿಯೇ ಜೀರ್ಣೋದ್ದಾರ ಕಾರ್ಯ ಕೈಗೊಳ್ಳುವುದಾಗಿ ತಿಳಿಸಿದರು.  ಶತಮಾನದ ಇತಿಹಾಸವಿರುವ ದೇವರಾಜ ಮಾರುಕಟ್ಟೆ ಎರಡು ದಿನಗಳ ಹಿಂದಷ್ಟೇ ಧರಾಶಾಹಿಯಾಗಿತ್ತು.

market-3

ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ಶಾಸಕರಾದ ಎಂ.ಕೆ. ಸೋಮಶೇಖರ್, ವಾಸು, ಜಿಲ್ಲಾಧಿಕಾರಿ ರಣದೀಪ್, ಮುಡಾ ಆಯುಕ್ತ ಡಾ.ಎಂ.ಮಹೇಶ್, ನಗರಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

HAM_6587

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ತಮ್ಮ ನಿವಾಸದಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿ, ಮನವಿ ಸ್ವೀಕರಿಸಿದರು.

CM  janatha Darshana

ತಮಿಳುನಾಡಿಗೆ ನೀರು ಬಿಡುವ ಕುರಿತು ಪ್ರತಿಕ್ರಿಯಿಸಿದ ಸಿಎಂ, ತಮಿಳುನಾಡು 50ಟಿಎಂಸಿ ನೀರನ್ನು ಕೇಳುತ್ತಿದೆ. ನಮ್ಮಲ್ಲಿರುವ ನೀರು ಕುಡಿಯೋದಿಕ್ಕೆ ಸಾಕಾಗ್ತಾ ಇಲ್ಲ. 40ಟಿಎಂಸಿ ನೀರು ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಯ ಜನತೆಗೆ ಕುಡಿಯೋದಕ್ಕೆ ಬೇಕು. ಆದ್ದರಿಂದ ನೀರು ಕೊಡಲು ಸಾಧ್ಯವಿಲ್ಲ. ಈ ಕುರಿತು ಸುಪ್ರೀಂಕೋರ್ಟ್ ಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.

Leave a Reply

comments

Related Articles

error: