ಕರ್ನಾಟಕಪ್ರಮುಖ ಸುದ್ದಿಮನರಂಜನೆಮೈಸೂರು

ಮೈಸೂರಿಗೆ ಪವರ್ ಸ್ಟಾರ್ ಭೇಟಿ : ನೆಚ್ಚಿನ ಅಭಿಮಾನಿಯನ್ನು ನೋಡಲು ಮುಗಿಬಿದ್ದ ಜನತೆ

ಪ್ರಮುಖಸುದ್ದಿ,ಮೈಸೂರು,ಮೇ.13:- ರಾಜ್ಯಾದ್ಯಂತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಆ ಪ್ರಯುಕ್ತ ನಟ ಪುನೀತ್ ರಾಜ್ ಕುಮಾರ್ ಮೈಸೂರಿನಲ್ಲಿ ರಾಜ್ ಕುಮಾರ್ ಚಿತ್ರ ಪ್ರದರ್ಶನ ಕಾಣುತ್ತಿರುವ ಚಿತ್ರ ಮಂದಿರಗಳಿಗೆ ಭೇಟಿ ನೀಡಿದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೈಸೂರಿನ ಸರಸ್ವತಿ, ಲೀಡೋ, ಗಾಯಿತ್ರಿ ಚಿತ್ರಮಂದಿರಗಳಿಗೆ ಭೇಟಿ ನೀಡಿದರು. ಈ ಸಂದರ್ಭ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದರು.

ಈ ಸಂದರ್ಭ ಮಾತನಾಡಿದ ಅವರು ರಾಜ್ಯಾದ್ಯಂತ ರಾಜಕುಮಾರ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರವನ್ನು ಜನರು ಇಷ್ಟಪಟ್ಟಿದ್ದಾರೆ. ಜನರ ಅಭಿಮಾನಕ್ಕೆ ಋಣಿ ಎಂದರು.- (ವರದಿ:ಕೆ.ಎಸ್,ಎಸ್.ಎಚ್)

Leave a Reply

comments

Related Articles

error: