ಸುದ್ದಿ ಸಂಕ್ಷಿಪ್ತ

ಪತ್ರಕರ್ತರ ಮಕ್ಕಳ ಶಿಕ್ಷಣ ನಿಧಿಗೆ ಅರ್ಜಿ ಆಹ್ವಾನ

ಮೈಸೂರು.ಮೇ.13 : ಮೈಸೂರು ಪತ್ರಕರ್ತರ ಸಂಘದಿಂದ ಮಕ್ಕಳ ಶಿಕ್ಷಣ ನಿಧಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಂಘದ ಸದಸ್ಯರ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಲು ಪ್ರಸ್ತಕ ಸಾಲಿನಿಂದ ಸಂಘದ ಆದಾಯದ ಶೇ.25ರಷ್ಟು ಹಣವನ್ನು ಪತ್ರಕರ್ತರ ಮಕ್ಕಳ ಶಿಕ್ಷಣಕ್ಕೆ ವಿನಿಯೋಗಿಸಲು ಕಾರ್ಯಕಾರಿಣಿ ಮಂಡಳಿ ತೀರ್ಮಾನಿಸಲಾಗಿದೆ.

ಈ ನಿಟ್ಟಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತೀರ್ಣರಾದ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಗುವುದು. ಅಲ್ಲದೇ 1 ರಿಂದ 10ನೇ ತರಗತಿಯವರೆಗೂ ವ್ಯಾಸಂಗ ಮಾಡುವ ಮಕ್ಕಳಿಗೂ ಪ್ರೋತ್ಸಾಹ ನೀಡಲಾಗುವುದು. ಪ್ರಯೋಜನ ಬಯಸುವ ಪತ್ರಕರ್ತರು ತಮ್ಮ ಮಕ್ಕಳ ಅಂಕಪಟ್ಟಿ, ಶಾಲೆ ದಾಖಲೆಗಳು, ಆದಾರ ಕಾರ್ಡ್  ವಿಳಾಸದೊಂದಿಗೆ ಕಚೇರಿಗೆ ಮೇ.25ರೊಳಗೆ ತಲುಪಿಸಬೇಕು ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9741511340 ಮತ್ತು 9480748177 ಅನ್ನು ಸಂಪರ್ಕಿಸಬಹುದು.(ಕೆ.ಎಂ.ಆರ್)

 

Leave a Reply

comments

Related Articles

error: