ನಮ್ಮೂರುಮೈಸೂರು

ಮೇ.22 ರಂದು ‘MIT ಮೈಸೂರು ಎಡಿನ್ ಕ್ರಿಕೆಟ್ ಪಂದ್ಯಾವಳಿ 2022” ಉದ್ಘಾಟನೆ

ಮೈಸೂರು,ಮೇ.19 :- ಎಡಿನ್ ಸಿನರ್ಜಿ ಸಂಸ್ಥೆಯು ನಡೆಸುತ್ತಿರುವ ‘MIT ಮೈಸೂರು ಎಡಿನ್ ಕ್ರಿಕೆಟ್ ಪಂದ್ಯಾವಳಿ 2022” ಮೇ.22 ರಂದು ಉದ್ಘಾಟನೆಯಾಗಲಿದೆ.
ಇಂದು ಮೈಸೂರು ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಎಡಿನ್ ಸಿನರ್ಜಿ ಸಂಸ್ಥೆಯ ಮುಖ್ಯಸ್ಥರಾದ ಹೇಮಲತಾ ಮಾತನಾಡಿ, ಎಡಿನ್ ಸಿನರ್ಜಿ ಸಂಸ್ಥೆಯ ನಡೆಸುತ್ತಿರುವ ‘MIT ಮೈಸೂರು ಎಡಿನ್ ಕ್ರಿಕೆಟ್ ಪಂದ್ಯಾವಳಿ 2022” ಕಳೆದ ವಾರ ಪ್ರಾರಂಭವಾಗಿದ್ದು, ಈಗಾಗಲೇ 14 ಪಂದ್ಯಗಳು ಮುಗಿದಿವೆ,
ಇನ್ನೂ ಉಳಿದ ಕ್ರೀಡಾಕೂಟದ ಚಾಂಪಿಯನ್ಸ್ ಸುತ್ತನ್ನು ಕನ್ನಡ ಚಲನಚಿತ್ರರಂಗದ ಹೆಸರಾಂತ ನಟಿ ಹರಿಪ್ರಿಯಾ ಅವರು ಮೇ.22 ರಂದು ಉದ್ಘಾಟಿಸುತ್ತಿದ್ದಾರೆ. ಕ್ರೀಡಾಕೂಟವನ್ನು ಸಾಮಾಜಿಕ ಕಾರಣಕ್ಕಾಗಿ ನಡೆಸಲಾಗುತ್ತಿದ್ದು, ಸಂಗ್ರಹವಾದ ಹಣವನ್ನು ಸಾಮಾಜಿಕ ಕಾರ್ಯಕ್ರಮಕ್ಕೆ ದೇಣಿಗೆಯಾಗಿ ನೀಡಲಾಗುವುದು ಎಂದು ತಿಳಿಸಿದರು.
ಕ್ರೀಡಾಕೂಟವು ಮೈಸೂರಿನ ಮಹಾರಾಜ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಕ್ರೀಡಾಂಗಣ ಬೆಳವಾಡಿಯಲ್ಲಿ ನಡೆಯುತ್ತಿದೆ, ಈ ಕ್ರೀಡಾಕೂಟದಲ್ಲಿ ಮೈಸೂರಿನ ಹಾಗೂ ನಂಜನಗೂಡಿನ ಪ್ರತಿಷ್ಠಿತ ಕಂಪನಿಗಳು, ಪತ್ರಿಷ್ಠಿತ ಕಾಲೇಜು ವಿದ್ಯಾಸಂಸ್ಥೆಗಳು ಭಾಗವಹಿಸುತ್ತಿದೆ.
ಕ್ರೀಡಾಕೂಟದಲ್ಲಿ ಈಗಾಗಲೇ 32 ತಂಡಗಳು ಭಾಗವಹಿಸಿದ್ದು, 14 ಪಂದ್ಯಗಳು ಮುಗಿದಿದೆ. ಮುಂದಿನ ಹಂತದಲ್ಲಿ 17 ಪಂದ್ಯಗಳು ನಡೆಯಲಿದ್ದು, ಇದರೊಂದಿಗೆ ಒಂದು ಮಹಿಳಾ ಪಂದ್ಯ ಕೂಡ ನಡೆಯಲಿದೆ ಎಂಬ ಮಾಹಿತಿಯನ್ನು ನೀಡಿದರು.
ಸುದ್ದಿಗೋಷ್ಠಿ ಯಲ್ಲಿ ಎಡಿನ್ ಕ್ರೀಡಾ ವಿಭಾಗ ಮುಖ್ಯಸ್ಥ ರಾಘವ್, ಎಡಿನ್ ಬ್ರಿಡ್ಜ್ ಮುಖ್ಯಸ್ಥ ಪ್ರತಾಪ್ ಹಾಸನ್, ಎಡಿನ್ ಸಿನರ್ಜಿ ಮುಖ್ಯಸ್ಥ ಫಣೀಶ್.ಎಂ ಹಾಗೂ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಂ)

Leave a Reply

comments

Related Articles

error: