
ಕರ್ನಾಟಕಪ್ರಮುಖ ಸುದ್ದಿ
ಶಾಸಕ ರಾಜೂಗೌಡ ಹೆಸರೇಳಿ ಜನರನ್ನು ವಂಚಿಸಿದ್ದ ನಯವಂಚಕಿಯ ಬಂಧನ
ರಾಜ್ಯ(ಬೆಂಗಳೂರು),ಮೇ.19 : ಶಾಸಕ ರಾಜೂಗೌಡ ಹೆಸರೇಳಿ ಜನರನ್ನು ವಂಚಿಸಿದ್ದ ನಯವಂಚಕಿ ರೇಖಾ ಎಂಬಾಕೆಯನ್ನು ಸುರಪುರ ಪೊಲೀಸರು ಬಂಧಿಸಿದ್ದಾರೆ.
ಎನ್.ಜಿ.ಓ ಮೂಲಕ ಬ್ಯಾಂಕ್ ಓಪನ್ ಮಾಡಿ ಬ್ಯಾಂಕಿನಲ್ಲಿ ನೌಕರಿ ಕೊಡಿಸುವುದಾಗಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ರೇಖಾ ಮೋಸ ಮಾಡಿದ್ದಾಳೆ. ತನ್ನ ಈ ನೀಚ ಕೃತ್ಯಕ್ಕೆ ಶಾಸಕ ರಾಜೂಗೌಡ ಹೆಸರನ್ನು ಬಳಸಿಕೊಂಡಿದ್ದಳು. ಈ ಬಗ್ಗೆ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಜೂಗೌಡ, ಸುರಪುರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದರು.
ಇದೀಗ ಸಕಲೇಶಪುರ ಮೂಲದ ರೇಖಾಳನ್ನು ಬಂಧಿಸುವಲ್ಲಿ ಸುರಪುರ ಪೊಲೀಸರು ಯಶಸ್ವಿಯಾಗಿದ್ದಾರೆ, ಬೆಂಗಳೂರಿನ ಕೆ.ಆರ್.ಪುರಂನಲ್ಲಿ ರೇಖಾ ವಾಸವಿದ್ದಳು ಹಾಗೇಯೇ ಬೆಂಗಳೂರಿನಲ್ಲೇ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಳು.
ಸುರಪುರ ಪಿಐ ಸುನೀಲ್ ಮೂಲಿಮನಿ, ಸೈಬರ್ ಕ್ರೈಂ ಪಿಐ ಬಾಪುಗೌಡ ಪಾಟೀಲ್ ನೇತೃತ್ವದಲ್ಲಿ ರೇಖಾಳ ಬಂಧಮವಾಗಿದ್ದು, ಸುರಪುರಕ್ಕೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.(ಎಸ್.ಎಂ)