ಮೈಸೂರು

ಸಿಎಫ್ ಟಿಆರ್ ಐ ನಲ್ಲಿ ಟೆಕ್ ಭಾರತ್ ಮೇಳಕ್ಕೆ ಚಾಲನೆ : ರೈತ ನೇರವಾಗಿ ಗ್ರಾಹಕನನ್ನು ತಲುಪಿದರೆ ಆದಾಯ ದ್ವಿಗುಣಗೊಳ್ಳಲು ಸಾಧ್ಯ; ಬಿ.ಸಿ.ಪಾಟೀಲ್

ಮೈಸೂರು,ಮೇ.19:- ಮೈಸೂರಿನ ಸಿಎಫ್ ಟಿಆರ್ ಐ ನಲ್ಲಿ  ಟೆಕ್ ಭಾರತ್ ಮೇಳವನ್ನು ಇಂದು ಆಯೋಜಿಸಲಾಗಿತ್ತು.

ಮೇಳಕ್ಕೆ  ಕೃಷಿ ಸಚಿವ ಬಿ.ಸಿ.ಪಾಟೀಲ್ ಮತ್ತು ಯೂನಿಯನ್ ಮಿನಿಸ್ಟರ್ ಕೈಲಾಶ್ ಚೌಧರಿ ಚಾಲನೆ ನೀಡಿದರು.  ಇಂದಿನಿಂದ ಮೂರು ದಿನಗಳ ಕಾಲ ಮೇಳ ನಡೆಯಲಿದೆ. ಸಚಿವ ಬಿ.ಸಿ.ಪಾಟೀಲ್ ಮಾತನಾಡಿ ರೈತ ಬೆಳೆ ಬೆಳೆಯಲು ಮಾತ್ರ ಸೀಮಿತನಾಗಿದ್ದಾನೆ. ಆದರೆ ಬೆಳೆ ಬೆಳೆದ ರೈತ ನೇರವಾಗಿ ಗ್ರಾಹಕನನ್ನು ತಲುಪಿದರೆ ಮಾತ್ರ ಆತನ ಆದಾಯ ದ್ವಿಗುಣವಾಗಲು ಸಾಧ್ಯ. ಹಾಗಾಗಿ ಪ್ರಧಾನ ಮಂತ್ರಿ  ಲಘು   ಉದ್ಯೋಗ ಭಾರತ್ ಯೋಜನೆ ಜಾರಿಗೆ ತಂದಿದ್ದಾರೆ. ರೈತರನ್ನು ಉತ್ತೇಜಿಸುವ ಕೆಲಸವಾಗುತ್ತಿದೆ. ಲಘು ಉದ್ಯೋಗ ಭಾರತ್ ದಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸಿಗುವಂತಾಗಿದೆ ಎಂದರು. ಕೃಷಿಕರ ಕುರಿತು ಸಾಕಷ್ಟು ಚಿಂತನೆಯನ್ನು ಮಾಡಬೇಕು. ಆ ಕುರಿತು ಸಾಕಷ್ಟು ಆಲೋಚನೆಗಳನ್ನು ಸರ್ಕಾರ ಮಾಡುತ್ತಿದೆ. ವ್ಯವಸಾಯವನ್ನು ಬಹಳ ಕೇವಲವಾಗಿ ನೋಡಲಾಗುತ್ತಿತ್ತು ಆದರೆ ಈಗ ಅದರ ಮಹತ್ವ ಎಲ್ಲರಿಗೂ ಅರ್ಥವಾಗಿದೆ. ರೈತರಿಗೆ ಉಪಕಸುಬುಗಳನ್ನು ಮಾಡಲು ಅವಕಾಶ ನೀಡಲಾಗಿದೆ. ರೈತರು ತಾವೇ ಸಂಸ್ಕರಣೆ ಮಾಡಿ ಮಾರುಕಟ್ಟೆ ಮಾಡಿದರೆ ಉತ್ತಮ ವಾದ ಲಾಭಗಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಟೆಕ್ ಭಾರತ್ ಮೇಳ ರೈತರಿಗೆ ಅನುಕೂಲವಾಗಲಿದೆ. ಲಘು ಉದ್ಯೋಗ ಭಾರತ್ ಬಹಳ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಎಪಿಇಡಿಎ ಅಧ್ಯಕ್ಷರು,   ಲಘು ಉದ್ಯೋಗ ಭಾರತ್ ಅಧ್ಯಕ್ಷರಾದ ಸಚಿನ್, ರಾಜವಂಶಸ್ಥ ಯದುವೀರ್ ಒಡೆಯರ್ ಮತ್ತಿತರರು ಭಾಗಿಯಾಗಿದ್ದರು.

Leave a Reply

comments

Related Articles

error: