ಸುದ್ದಿ ಸಂಕ್ಷಿಪ್ತ
ಕೃತಿ ಲೋಕಾರ್ಪಣೆ ಮೇ.14ಕ್ಕೆ
ಮೈಸೂರು.ಮೇ.13 : ಜಿಲ್ಲಾ ಕಸಾಪ ಮತ್ತು ಇಂಚರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಮೇ. 14ರ ಸಂಜೆ 4ಕ್ಕೆ ಚಿಂತನ ಚಿಲುಮೆ ಮತ್ತು ಸಂಸ್ಕೃತಿ ಸಾಧಕ ಕೃತಿಗಳ ಲೋಕಾರ್ಪಣೆಯನ್ನು ಏರ್ಪಡಿಸಲಾಗಿದೆ.
ಕವಿಯತ್ರಿ ಡಾ.ಲತಾ ರಾಜಶೇಖರ್ ಉದ್ಘಾಟಿಸುವರು, ಡಾ.ಭಾಷ್ಯಂ ಸ್ವಾಮೀಜಿ ಸಾನಿಧ್ಯ ವಹಿಸುವರು, ಕಸಾಪ ಜಿಲ್ಲಾಧ್ಯಕ್ಷ ಡಾ.ವೈಡಿ.ರಾಜಣ್ಣ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಡಾ.ಕೆ.ಅನಂತರಾಮು, ಡಾ.ಎಸ್.ಶಿವರಾಜಪ್ಪ ಕೃತಿಗಳನ್ನು ಬಿಡುಗಡೆಗೊಳಿಸುವರು. ಮುಖ್ಯ ಅತಿಥಿಗಳಾಗಿ ಕೆ.ರಘುರಾಮಯ್ಯ ವಾಜಪೇಯಿ, ಬಿ.ಆರ್.ನಟರಾಜ ಜೋಯ್ಸ್, ಬಿ.ಪಿ.ಅಶ್ವಥನಾರಾಯಣ ಉಪಸ್ಥಿತರಿರುವರು. (ಕೆ.ಎಂ.ಆರ್)