ಕರ್ನಾಟಕಪ್ರಮುಖ ಸುದ್ದಿ

ಮುಂಗಾರು ಪೂರ್ವದಲ್ಲಿ ಸುರಿದ ಭಾರಿ ಮಳೆಗೆ ತತ್ತರಿಸಿದ ಬೆಂಗಳೂರು : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿಎಂ

ರಾಜ್ಯ(ಬೆಂಗಳೂರು),ಮೇ.19 : ಮುಂಗಾರು ಪೂರ್ವದಲ್ಲಿ ಸುರಿದ ಭಾರಿ ಮಳೆಗೆ ಬೆಂಗಳೂರು ತತ್ತರಿಸಿದ ಹಿನ್ನೆಲೆಯಲ್ಲಿ ಇಂದು ಸಿಎಂ ಬೊಮ್ಮಾಯಿ ಅಧಿಕಾರಿಗಳ ಸಭೆ ನಡೆಸಿದ್ದು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮೊನ್ನೆ ಸುರಿದ ಭಾರಿ ಮಳೆಯಿಂದ ಉಂಟಾಗಿರುವ ಹಾನಿಯ ಪರಿಶೀಲನೆಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಸಿಟಿ ರೌಂಡ್ಸ್​ ನಡೆಸಿದರು. ಸುಮಾರು ಎರಡೂವರೆ ಗಂಟೆಗಳ ಕಾಲ ಅವರು ಮಹಾಲಕ್ಷ್ಮಿಲೇಔಟ್​, ನಾಗವಾರ, ಹೆಚ್​ಬಿಆರ್​​ ಲೇಔಟ್​ , ಹೆಬ್ಬಾಳ ಎಸ್.ಟಿ.ಪಿಯಲ್ಲಿ ಮಳೆ ಹಾನಿ ಪರಿಶೀಲನೆ ಮಾಡಿದ್ದಾರೆ.

ಹಿಂದೆ ಯಾವತ್ತೂ ಮೇ ತಿಂಗಳಲ್ಲಿ ಇಷ್ಟು ಮಳೆ ಬಿದ್ದಿಲ್ಲ. ಒಂದು ತಿಂಗಳ ಮಳೆ ಕೇವಲ 4 ಗಂಟೆಗಳಲ್ಲಿ ಸುರಿದಿದೆ. ವೃಷಭಾವತಿ ಸೇರಿ ಎಲ್ಲಾ ರಾಜಕಾಲುವೆ ಸರಿ ಮಾಡುತ್ತೇವೆ. ಈಗಾಗಲೇ 400 ಕೋಟಿ ವೆಚ್ಚದ ಕೆಲಸ ನಡೆಯುತ್ತಿದೆ. ವೃಷಭಾವತಿ ಕಾಲುವೆ ರೀ ಮಾಡೆಲ್​ಗೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.

ಸಿಟಿ ರೌಂಡ್ಸ್ ಬಳಿಕ ಸಿಎಂ ಬೊಮ್ಮಾಯಿ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ರಾಜಕಾಲುವೆಗಳಲ್ಲಿ ಹೂಳು ತೆಗೆಯದ ಹಿನ್ನೆಲೆಯಲ್ಲಿ ಸಭೆಯಲ್ಲಿ ಬಿಬಿಎಂಪಿ ರಾಜಕಾಲುವೆ ವಿಭಾಗದ ಚೀಫ್ ಎಂಜಿನಿಯರ್ ಸುಗುಣಾ ಅವರ ಮೇಲೆ ಸಿಎಂ ಗರಂ ಆಗಿದ್ದು, ಅವರನ್ನು ಎತ್ತಂಗಡಿ ಮಾಡುವಂತೆ ಸಭೆಯಲ್ಲೇ ಸೂಚಿಸಿದ್ದಾರೆ. ಇದೇ ವೇಳೆ 1500 ಕೋಟಿ ಹಣ ರಿಲೀಸ್ ಮಾಡಿದ್ದೇವೆ, ಆದರೂ ರಾಜಕಾಲುವೆ ಸಮಸ್ಯೆ ಇತ್ಯರ್ಥ ಆಗಿಲ್ಲ ಎಂದು ಸುಗುಣ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನೀವೇನು​ ಮಾಡ್ತಿದ್ದೀರಿ..ಪ್ರತಿ ಬಾರಿಯೂ ಇದೇ ಕತೆ ಹೇಳ್ತೀರಿ, ಶೀಘ್ರವೇ ಪ್ರೈಮರಿ ಕಾಲುವೆಗಳ ಹೂಳು ತೆಗೆಯಿರಿ ಎಂದು ಸೂಚನೆ ನೀಡಿದ್ದಾರೆ.(ಎಸ್.ಎಂ)

Leave a Reply

comments

Related Articles

error: