ಕರ್ನಾಟಕಪ್ರಮುಖ ಸುದ್ದಿ

ಬಾಣಸವಾಡಿಯ ಸಾಯಿಬಾಬಾ ದೇಗುಲ ನೆಲಸಮ : ಗ್ರಾಮಸ್ಥರು ಆಕ್ರೋಶ

ರಾಜ್ಯ(ಬೆಂಗಳೂರು),ಮೇ.19 : ಸಿಲಿಕಾನ್ ಸಿಟಿಯ ಬಾಣಸವಾಡಿಯಲ್ಲಿರುವ ಸಾಯಿಬಾಬಾ ದೇಗುಲವನ್ನು ನೆಲಸಮ ಮಾಡಲಾಗಿದೆ.

ಬೆಂಗಳೂರಿನ ಬಾಣಸವಾಡಿಯಲ್ಲಿರುವ ಸಾಯಿಬಾಬಾ ದೇಗುಲವು ಅನಧಿಕೃತ ಎಂದು ತಹಶೀಲ್ದಾರರ ನೇತೃತ್ವದಲ್ಲಿ ನಾಶ ಮಾಡಲಾಗಿದೆ. ಇದೀಗ ದೇಗುಲವನ್ನು ಕೆಡವಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊರಗಡೆ ಪ್ರತಿಷ್ಠಾಪನೆ ಮಾಡಿದ ಆಂಜನೇಯ ದೇಗುಲದ ಹೊರಭಾಗವನ್ನು ಕೂಡ ಸಿಬ್ಬಂದಿ ಜೆಸಿಬಿಯಲ್ಲಿ ತೆಗೆದಿದ್ದಾರೆ.

ಮಂತ್ರಿ ಮಹಲ್ ಹಾಗೂ ಬಸವೇಶ್ವರ ವೃತ್ತ (ವಿಧಾನ ಸೌಧದ ಬಳಿ) ಇರುವ ದರ್ಗಾ ಅಧಿಕೃತವೇ ಇದಕ್ಕೆ ಸರ್ಕಾರ ಅನುಮತಿ ನೀಡಿದೆಯಾ? ಹಿಂದೂ ದೇವಾಲಯಗಳೇ ಏಕೆ ಗುರಿ ಮಾಡುತ್ತಿದ್ದೀರ, ರಾಜಕೀಯ ವ್ಯಕ್ತಿಗಳಿಗೆ ಕಾನೂನು ಇಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಮೂರ್ತಿಯನ್ನು ನೀವೇ ತೆಗೆದುಕೊಂಡು ಹೋಗಿ ಇಲ್ಲವೇ ನಾವೇ ಎತ್ತಿಕೊಂಡು ಹೋಗುತ್ತೇವೆ ಎಂದು ಸಿಬ್ಬಂದಿ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ದೇವಾಲಯ ಆವರಣದೊಳಗೆ ಸಾರ್ವಜನಿಕರು ಜಮಾಯಿಸಿದ್ದಾರೆ. ಅಲ್ಲದೆ ಆಂಜನೇಯ ವಿಗ್ರಹ ತೆರವು ಹಿನ್ನೆಲೆಯಲ್ಲಿ ಕೊನೆಯ ಬಾರಿ ಪೂಜೆ ಸಲ್ಲಿಸಿ ಗ್ರಾಮಸ್ಥರು ಭಾವುಕರಾಗಿದ್ದಾರೆ.(ಎಸ್.ಎಂ)

Leave a Reply

comments

Related Articles

error: