ಸುದ್ದಿ ಸಂಕ್ಷಿಪ್ತ

ತಾಲ್ಲೂಕು ಮಟ್ಟದ ಕ್ರೀಡೋತ್ಸವ ಮೇ.16ಕ್ಕೆ

ಮೈಸೂರು.ಮೇ.13 : ನಂಜನಗೂಡು ತಾಲ್ಲೂಕು ಮಟ್ಟದ ಕ್ರೀಡೋತ್ಸವವನ್ನು ಮೇ.16ರಂದು ತಾಲ್ಲೂಕಿನ ಹರದನಹಳ್ಳಿಯಲ್ಲಿ ಆಯೋಜಿಸಲಾಗಿದೆ.

ಕ್ರೀಡಾಕೂಟವನ್ನು ಕಳಲೆಯ ನವಭಾರತ ಯುವಜನ ಸಂಘ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದೆ.  ಕ್ರೀಡಾಕೂಟದಲ್ಲಿ ದೇಶಿ ಕ್ರೀಡೆಗಳಾದ ಕಬಡ್ಡಿ, ಖೋಖೋ, ಕುಂಟೆಬಿಲ್ಲೆ, ಹಗ್ಗಜಗ್ಗಾಟ, ಚಿನ್ನೀಕೋಲು ಮುಂತಾದ ಕ್ರೀಡೆಗಳನ್ನು ನಡೆಸಲಾಗುವುದು. ಹೆಸರು ನೋಂದಾಯಿಸಿಕೊಳ್ಳಲು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 8884725044 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: