ಕರ್ನಾಟಕಪ್ರಮುಖ ಸುದ್ದಿ

ಎಸ್ಸೆಸ್ಸೆಲ್ಸಿ; ಕೊಡಗು ಜಿಲ್ಲೆಗೆ ಶೇ.91.44 ರಷ್ಟು ಫಲಿತಾಂಶ

ರಾಜ್ಯ(ಮಡಿಕೇರಿ) ಮೇ.20:-ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟವಾಗಿದೆ.
ಕೊಡಗು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪರೀಕ್ಷೆ ಬರೆದ 6,317 ವಿದ್ಯಾರ್ಥಿಗಳಲ್ಲಿ 5,776 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.91.44 ರಷ್ಟು ಫಲಿತಾಂಶ ಬಂದಿದೆ. ಇವರಲ್ಲಿ 2,702 ಬಾಲಕರು ಮತ್ತು 3,074 ಬಾಲಕಿಯರು ಉತ್ತೀರ್ಣರಾಗಿದ್ದಾರೆ.
ಮಡಿಕೇರಿ ತಾಲ್ಲೂಕಿಗೆ ಸಂಬಂಧಿಸಿದಂತೆ ಪರೀಕ್ಷೆ ಬರೆದ 1,831 ವಿದ್ಯಾರ್ಥಿಗಳಲ್ಲಿ 1,748 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.95.47 ರಷ್ಟು ಫಲಿತಾಂಶ ದೊರೆತಿದೆ.
ಸೋಮವಾರಪೇಟೆ ತಾಲ್ಲೂಕಿನಲ್ಲಿ ಪರೀಕ್ಷೆ ಬರೆದ 2,504 ವಿದ್ಯಾರ್ಥಿಗಳಲ್ಲಿ 2,290 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.91.45 ರಷ್ಟು ಫಲಿತಾಂಶ ದೊರೆತಿದೆ.
ವಿರಾಜಪೇಟೆ ತಾಲ್ಲೂಕಿನಲ್ಲಿ ಪರೀಕ್ಷೆ ಬರೆದ 1,982 ವಿದ್ಯಾರ್ಥಿಗಳಲ್ಲಿ 1,738 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.87.69 ರಷ್ಟು ಫಲಿತಾಂಶ ಬಂದಿದೆ.
ಪ್ರಥಮ ಮತ್ತು ರಿಫೀಟರ್ಸ್ ಒಟ್ಟು ಸೇರಿ ಪರೀಕ್ಷೆ ಬರೆದ 6,710 ವಿದ್ಯಾರ್ಥಿಗಳಲ್ಲಿ 5,803 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.86.48 ರಷ್ಟು ಫಲಿತಾಂಶ ಬಂದಿದೆ.
ಜಿಲ್ಲೆಯಲ್ಲಿ ಅನುದಾನಿತ 6 ಶಾಲೆಗಳು, ಅನುದಾನ ರಹಿತ 39 ಶಾಲೆಗಳು, 10 ಸರ್ಕಾರಿ ಶಾಲೆಗಳು, 05 ಸರ್ಕಾರಿ ವಸತಿ ಶಾಲೆಗಳು ಒಟ್ಟು 60 ಶಾಲೆಗಳಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ.
ಹಾಗೆಯೇ ಕನ್ನಡ ಭಾಷಾ ವಿಷಯದಲ್ಲಿ 104 ವಿದ್ಯಾರ್ಥಿಗಳು 125 ಕ್ಕೆ 125 ಅಂಕ ಪಡೆದಿದ್ದಾರೆ. ಇಂಗ್ಲೀಷ್ ಭಾಷಾ ವಿಷಯದಲ್ಲಿ 08 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದಿದ್ದಾರೆ. ಹಿಂದ ಭಾಷಾ ವಿಷಯದಲ್ಲಿ 257 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದಿದ್ದಾರೆ. ಗಣಿತ ವಿಷಯದಲ್ಲಿ 61 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದಿದ್ದಾರೆ. ವಿಜ್ಞಾನ ವಿಷಯದಲ್ಲಿ 21 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದಿದ್ದಾರೆ. ಹಾಗೆಯೇ ಸಮಾಜ ವಿಜ್ಞಾನದಲ್ಲಿ 407 ವಿದ್ಯಾರ್ಥಿಗಳು 100 ಕ್ಕೆ 100 ಅಂಕ ಪಡೆದು ಉತ್ತೀರ್ಣರಾಗಿದ್ದಾರೆ.
ಜಿಲ್ಲೆಯಲ್ಲಿ 622 ಅಂಕವನ್ನು ನಾಲ್ವರು ವಿದ್ಯಾರ್ಥಿನೀಯರು ಪಡೆದಿದ್ದಾರೆ. 621 ಅಂಕವನ್ನು ನಾಲ್ವರು ವಿದ್ಯಾರ್ಥಿಗಳು, 620 ಅಂಕವನ್ನು ಐವರು ವಿದ್ಯಾರ್ಥಿಗಳು, 619 ಅಂಕವನ್ನು ಐವರು ವಿದ್ಯಾರ್ಥಿಗಳು ಗಳಿಸಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ವೇದಮೂರ್ತಿ ಅವರು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: