ಕರ್ನಾಟಕಪ್ರಮುಖ ಸುದ್ದಿ

ಬೆಳೆ ಹಾನಿ : ಜಿಲ್ಲಾಧಿಕಾರಿ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ

ರಾಜ್ಯ(ದಾವಣಗೆರೆ) ಮೇ.20:- ಜಿಲ್ಲೆಯಲ್ಲಿ  ಭಾರಿ ಮಳೆ ಸುರಿದ ಪರಿಣಾಮ ಹರಿಹರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹರಿಹರ ತಾಲ್ಲೂಕಿನ ನಂದಿಗುಡಿ ಗ್ರಾಮದಲ್ಲಿ ಹೊಸ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕರ್ಲಳ್ಳಿ ಹಳ್ಳಕ್ಕೆ ಬ್ರಿಡ್ಜ್ ನಿರ್ಮಿಸಲಾಗುತ್ತಿರುವ ಹಿನ್ನಲೆ ಸಂಪರ್ಕಕ್ಕಾಗಿ ತಾತ್ಕಾಲಿಕ ಮಣ್ಣಿನ ಪೈಪ್‍ಲೈನ್ ರಸ್ತೆ ನಿರ್ಮಾಣ ಮಾಡಲಾಗಿತ್ತು, ಮಳೆಯಿಂದಾಗಿ ತಾತ್ಕಾಲಿಕ ಮಣ್ಣಿನ ರಸ್ತೆ ಕೊಚ್ಚಿಕೊಂಡು ಹೋಗಿ ನಂದಿಗುಡಿ ಸಂಪರ್ಕ ರಸ್ತೆ ಕಡಿತವಾಗಿರುವ ಹಿನ್ನಲೆಯಲ್ಲಿ ರಸ್ತೆ ಸರಿಪಡಿಸುವಂತೆ ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಅಭಿಯಂತರರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಕಂಬತ್ತನಹಳ್ಳಿ, ಭಾಸ್ಕರ್ ರಾವ್ ಕ್ಯಾಂಪ್ ಮತ್ತು ಕೊಕ್ಕನೂರು ಗ್ರಾಮಗಳಿಗೆ ತಹಶೀಲ್ದಾರ್ ಜೊತೆಗೆ ಭೇಟಿ ನೀಡಿ ಹಾನಿಗೊಳಗಾದ ಭತ್ತ ಮತ್ತು ಅಡಿಕೆ ಬೆಳೆಗಳನ್ನು ಪರಿಶೀಲನೆ ನಡೆಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: