
ಮೈಸೂರು
ಪಿಂಜರಾ ಪೋಲ್ ಗೆ ಸಚಿವರ ಭೇಟಿ
ಮೈಸೂರು, ಮೇ.19:- ಗದಗ ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಕೃಷಿ ಸಚಿವರಾದ ಬಿ ಸಿ ಪಾಟೀಲ್ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ಮೈಸೂರಿನಲ್ಲಿರುವ ಪಿಂಜರಾಪೋಲ್ ಗೆ ಭೇಟಿ ನೀಡಿ ವಯಸ್ಸಾದ ಹಸುಗಳನ್ನು ಮತ್ತು ಆಕ್ಸಿಡೆಂಟ್ ಆದ ಹಸುಗಳನ್ನು ಪಿಂಜರಾಪೋಲ್ ನಲ್ಲಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಸಚಿವರಾದ ಕೈಲಾಶ್ ಚೌಧರಿ , ಕಾರ್ಯಕರ್ತರು ,ಅಧಿಕಾರಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)