ಮೈಸೂರು

ವಾಹನ ತಪಾಸಣೆ ವೇಳೆ ತಪ್ಪಿಸಿಕೊಳ್ಳಲು ಹೋಗಿ ಅಪಘಾತ : ಮೂವರು ಬೈಕ್ ಸವಾರರ ಕಾಲು ಮುರಿತ

ಮೈಸೂರು,ಮೇ.20:-  ವಾಹನ ತಪಾಸಣೆ ವೇಳೆ ನಡೆದ ಎಡವಟ್ಟಿಗೆ ಮೂವರು ಬೈಕ್ ಸವಾರರು ಆಸ್ಪತ್ರೆ ಸೇರಿದ ಘಟನೆ ನಂಜನಗೂಡಿನ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಂಜನಗೂಡಿನ ಸಿಂಧುವಳ್ಳಿ ಬಳಿಯ ಹುಣಸನಾಳು ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿ ಘಟನೆ ನಡೆದಿದೆ. ಗಾಯಗೊಂಡ ಯುವಕರು ಹುಣಸನಾಳು ಗ್ರಾಮದವರಾಗಿದ್ದಾರೆ. ನಿನ್ನೆ ಸಂಜೆ ಕರ್ತವ್ಯ  ಮುಗಿಸಿ ಹುಣಸನಾಳು ಗ್ರಾಮದತ್ತ ತ್ರಿಬಲ್ ರೈಡಿಂಗ್ ನಲ್ಲಿ ಬರುತ್ತಿದ್ದ ಯುವಕರು ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸರನ್ನು ಕಂಡು ಹಿಂದಕ್ಕೆ ಪರಾರಿಯಾಗಲು ಯತ್ನಿಸಿದ್ದಾರೆ. ಆತುರದಲ್ಲಿ ಯು ಟರ್ನ್ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಯುವಕರು ಹಾರಿ ಹೋಗಿ ಬಿದ್ದಿದ್ದಾರೆ. ಮೂವರೂ ಯುವಕರ ಕಾಲು ಮುರಿದಿದೆ ಎನ್ನಲಾಗಿದೆ. ಸ್ಥಳೀಯರ ನೆರವಿನಿಂದ ಗಾಯಗೊಂಡವರನ್ನು   ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. (ಕೆ.ಎಸ್,ಎಸ್.ಎಚ್)

ತ್ರಿಬಲ್ ರೈಡಿಂಗ್ ನಲ್ಲಿದ್ದ ಮೂವರು ಯುವಕರ ಕಾಲು ವಾಹನ ತಪಾಸಣೆ ತಂದ ಆಪತ್ತು…ಮೂವರು ಬೈಕ್ ಸವಾರರು ಆಸ್ಪತ್ರೆಗೆ ದಾಖಲು… ಮುರಿದಿದೆ.

Leave a Reply

comments

Related Articles

error: