ಮೈಸೂರು

ಎಸ್‍ ಎಸ್‍ ಎಲ್‍ ಸಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಗಮನಾರ್ಹ ಅಂಕ ಪಡೆದುಕೊಂಡ ರಂಗರಾವ್ ಮೆಮೋರಿಯಲ್ ಸ್ಕೂಲ್ ಫಾರ್ ಡಿಫರೆಂಟ್ಲಿಏಬಲ್ಡ್

ಮೈಸೂರು, ಮೇ.10:- ಎನ್‍ಆರ್ ಗ್ರೂಪ್‍ನ ಲೋಕಸೇವಾರ್ಥ ಅಂಗವಾಗಿರುವ ಎನ್‍ ಆರ್ ಫೌಂಡೇಷನ್‍ ನ ರಂಗರಾವ್ ಸ್ಮಾರಕ ವಿಕಲಚೇತನರ ಶಾಲೆಯು(ಆರ್‍ಎಂಎಸ್‍ಡಿ) 2021-22ರ ಸಾಲಿನಲ್ಲಿ ಕರ್ನಾಟಕ ಎಸ್‍ಎಸ್‍ಎಲ್‍ಸಿಯ 10ನೇ ತರಗತಿಯ ಫಲಿತಾಂಶಗಳಲ್ಲಿ ಶೇ.100ರಷ್ಟು ಸಾಧನೆ ಮಾಡಿರುವುದಲ್ಲದೆ, ಮೂರು ಡಿಸ್ಟ್ರಿಕ್ಷನ್‍ಗಳನ್ನು ಪಡೆದುಕೊಂಡಿದೆ.

ಅಶ್ವಿನಿ ಜಿ.ಎಂ. ಶೇ. 94.40 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದಿದ್ದು, ಸಂಧ್ಯಾ ಶೇ. 94.08 ಮತ್ತು ಕೀರ್ತಿ ಎಲ್. ಶೇ. 93ರಷ್ಟು ಅಂಕಗಳೊಂದಿಗೆ ನಂತರದ ಸ್ಥಾನ ಪಡೆದಿರುತ್ತಾರೆ. ಶಾಲೆಯಿಂದ ಒಟ್ಟು 13 ವಿದ್ಯಾರ್ಥಿಗಳು ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ ಮೂರು ವಿದ್ಯಾರ್ಥಿಗಳು ಎ+ ಅಂಕ ಪಡೆದರೆ ಆರು ವಿದ್ಯಾರ್ಥಿಗಳು ಎ, ಮೂರು ವಿದ್ಯಾರ್ಥಿ ಬಿ+ ಮತ್ತು ಒಬ್ಬರು ಬಿ ಅಂಕಗಳನ್ನು ಫಲಿತಾಂಶದಲ್ಲಿ ಸಂಪಾದಿಸಿರುತ್ತಾರೆ.
“ಮಕ್ಕಳ ಕೇಂದ್ರೀಕೃತ” ಯೋಜನೆಯಡಿಯಲ್ಲಿ ಕಾರ್ಯಾಚರಣೆ ನಡೆಸುವ ಶಾಲೆಗೆ ಕರ್ನಾಟಕ ರಾಜ್ಯದ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಬೆಂಬಲ ನೀಡಿದ್ದು, ಇದು ಸಂಪೂರ್ಣವಾಗಿ ಉಚಿತ ವಸತಿ ಶಾಲೆಯಾಗಿರುವುದಲ್ಲದೆ, ದೃಷ್ಟಿವೈಕಲ್ಯ ಹೊಂದಿರುವ ಬಾಲಕಿಯರಿಗೆ 1ರಿಂದ 10ನೇ ತರಗತಿಯವರೆಗೆ ತೆರೆದಿರುತ್ತದೆ.
ಎನ್‍ ಆರ್ ಗ್ರೂಪ್‍ ನ ಚೇರ್ಮನ್ ಆರ್. ಗುರು ಅವರು ಆರ್‍ಎಂಎಸ್‍ಡಿಯ ವಿದ್ಯಾರ್ಥಿಗಳ ಸಾಧನೆ ಕುರಿತು ಮಾತನಾಡಿ, “ವಿದ್ಯಾರ್ಥಿಗಳು ಸಾಧಿಸಿರುವ ಅಂಕಗಳು ಗಮನ ಸೆಳೆಯುವಂತಹವುಗಳಾಗಿವೆ. ಇದು ಅವರ ಕಠಿಣ ಪರಿಶ್ರಮ ಮಾತ್ರವಲ್ಲದೆ, ನಮ್ಮ ಶಿಕ್ಷಕರು ಮತ್ತು ಸಿಬ್ಬಂದಿಗಳ ಪರಿಶ್ರಮದ ಫಲಿತಾಂಶವೂ ಆಗಿರುತ್ತದೆ. ಇಂತಹ ಫಲಿತಾಂಶಗಳು ನಮಗೆ ವಿಕಲಚೇತನರ ಸಬಲೀಕರಿಸುವ ನಮ್ಮ ಮೂಲ ಉದ್ದೇಶವನ್ನು ಸಾಧಿಸಲು ನೆರವಾಗುತ್ತವೆ. ಅಲ್ಲದೆ, ಅವರಿಗೆ ಸ್ವತಂತ್ರವಾಗಿ ಮತ್ತು ಗೌರವಯುತವಾಗಿ ಜೀವನ ನಡೆಸಲು ಸಹಾಯ ಮಾಡುತ್ತವೆ’’ ಎಂದರು.
“ಮತ್ತಷ್ಟು ಎತ್ತರಕ್ಕೆ ಗುರಿ ಹೊಂದಲು ಈ ಯಶಸ್ಸು ನಮ್ಮನ್ನು ಪ್ರೋತ್ಸಾಹಿಸುತ್ತವೆ. ಜೊತೆಗೆ ಭವಿಷ್ಯದಲ್ಲಿ ಇನ್ನು ಹೆಚ್ಚಿನ ಫಲಿತಾಂಶಗಳನ್ನು ಎದುರು ನೋಡುವ ವಿಶ್ವಾಸವನ್ನು ನಮಗೆ ನೀಡುತ್ತವೆ. ಅವರ ಭವಿಷ್ಯದ ಪರಿಶ್ರಮಗಳಿಗೆ ನಾವು ಈ ವಿದ್ಯಾರ್ಥಿಗಳಿಗೆ ಶುಭಾಶಯ ಕೋರುತ್ತೇವೆ ಅಲ್ಲದೆ, ಅದಕ್ಕಾಗಿ ಎಲ್ಲಾ ಸಾಧ್ಯವಿರುವ ರೀತಿಯಲ್ಲಿ ನಮ್ಮ ಬೆಂಬಲ ನೀಡುತ್ತೇವೆ’’ ಎಂದು ಗುರು ಅವರು ಹೇಳಿದರು.
ತನ್ನ ಸಾಧನೆ ಕುರಿತು ಪ್ರತಿಕ್ರಿಯಿಸಿದ ಶಾಲೆಯಲ್ಲಿ ಅಗ್ರಸ್ಥಾನ ಪಡೆದ ಅಶ್ವಿನಿ ಜಿ.ಎಂ. ಮಾತನಾಡಿ, “ನನ್ನಲ್ಲಿ ನಂಬಿಕೆ ಇಟ್ಟಿದ್ದಕ್ಕೆ ಮತ್ತು ಈ ಫಲಿತಾಂಶ ಸಾಧಿಸುವುದಕ್ಕೆ ವರ್ಷದುದ್ದಕ್ಕೂ ನನಗೆ ಮಾರ್ಗದರ್ಶನ ನೀಡಿದ್ದಕ್ಕಾಗಿ ನನ್ನ ಶಿಕ್ಷಕರಿಗೆ ನಾನು ಕೃತಜ್ಞಳಾಗಿದ್ದೇನೆ. ನನಗೆ ಸತತವಾಗಿ ಬೆಂಬಲ ನೀಡಿದ ಶಾಲೆಗೆ ಹೆಮ್ಮೆಯನ್ನು ನನ್ನ ಫಲಿತಾಂಶ ತಂದಿರುವುದಕ್ಕೆ ನಾನು ಹರ್ಷಿಸುತ್ತೇನೆ. ನನ್ನ ಕನಸುಗಳ ಬೆನ್ನತ್ತಿ ಹೋಗಲು ಮತ್ತು ಭವಿಷ್ಯದಲ್ಲಿ ಸ್ಥಿರವಾದ ವೃತ್ತಿಜೀವನ ಕಂಡುಕೊಳ್ಳಲು ಈ ಶಾಲೆಯು ನನಗೆ ವಿಶ್ವಾಸ ತುಂಬಿದೆ’’ ಎಂದರು.
ಈ ಶಾಲೆಯನ್ನು 1988ರಲ್ಲಿ ಸ್ಥಾಪಿಸಲಾಗಿದ್ದು, 34ವರ್ಷ ದಿಂದ ಇದು ಮೈಸೂರು ಸುತ್ತಮುತ್ತಲಿನ ದೃಷ್ಟಿ ವಿಕಲಚೇತನ ಬಾಲಕಿಯರಿಗೆ ಶಿಕ್ಷಣ ಮತ್ತು ವೃತ್ತಿ ತರಬೇತಿಯನ್ನು ಪೂರೈಸುತ್ತಿದೆ. ವಸತಿ, ಭೋಜನ ಮತ್ತು ಆರೋಗ್ಯ ಸೇವಾ ಸೌಲಭ್ಯಗಳೊಂದಿಗೆ ಈ ಶಾಲೆ ಸಜ್ಜಾಗಿದೆ. ಪಠ್ಯಕ್ರಮ ಮಾತ್ರವಲ್ಲದೆ, ಒಟ್ಟಾರೆ ಸಂಪೂರ್ಣ ಅಭಿವೃದ್ಧಿಯನ್ನು ಕಲಿಸುವ ದೃಷ್ಟಿಕೋನದೊಂದಿಗೆ ಸ್ಥಾಪಿತವಾದ ಶಾಲೆ ಜೀವನಕೌಶಲ್ಯ, ಸಂಗೀತ, ನೃತ್ಯ ಮತ್ತು ಮೂಲ ಹಂತದ ಅಡುಗೆ ತರಬೇತಿಗಳನ್ನು ಕೂಡ ಪೂರೈಸುತ್ತದೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: