
ಕ್ರೀಡೆದೇಶಪ್ರಮುಖ ಸುದ್ದಿ
ಕೊಹ್ಲಿಯ ಅದ್ಭುತ ಪ್ರದರ್ಶನ : ಗುಜರಾತ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿ ಪ್ಲೇಆಫ್ ಭರವಸೆ ಜೀವಂತವಾಗಿರಿಸಿಕೊಂಡ ಆರ್ ಸಿಬಿ
ದೇಶ(ಮುಂಬೈ),ಮೇ.20:- 67ನೇ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಿತ್ತು. ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟಾನ್ಸ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದೆ. ಈ ಪಂದ್ಯವನ್ನು ಗೆದ್ದ ನಂತರ ಆರ್ಸಿಬಿ ಪ್ಲೇ ಆಫ್ ಗೆ ತಲುಪುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಈ ಗೆಲುವಿನ ಬಳಿಕ ಇದೀಗ 16 ಅಂಕ ಗಳಿಸಿದೆ.
169 ರನ್ ಗಳ ಗುರಿ ಬೆನ್ನತ್ತಿದ ಬೆಂಗಳೂರು 18.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಈ ಗುರಿ ತಲುಪಿತು. ಅಂತಿಮವಾಗಿ ಮ್ಯಾಕ್ಸ್ವೆಲ್ ಬೆಂಗಳೂರು ಪರ ಕೇವಲ 18 ಎಸೆತಗಳಲ್ಲಿ 40 ರನ್ ಗಳ ಅಜೇಯ ಇನ್ನಿಂಗ್ಸ್ ಆಡಿದರು. ಅವರ ಇನ್ನಿಂಗ್ಸ್ ನಲ್ಲಿ ಅವರು 5 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನು ಹೊಡೆದರು. ಇವರಲ್ಲದೆ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಕೂಡ ಫಾರ್ಮ್ ಗೆ ಮರಳುವ ಸೂಚನೆ ನೀಡಿದ್ದಾರೆ. ಈ ಪಂದ್ಯದಲ್ಲಿ ಅವರು 53 ಎಸೆತಗಳಲ್ಲಿ 73 ರನ್ ಗಳಿಸಿದರು. ಅವರ ಇನ್ನಿಂಗ್ಸ್ ನಲ್ಲಿ ಅವರು 8 ಬೌಂಡರಿ ಮತ್ತು 2 ಸಿಕ್ಸರ್ ಗಳನ್ನು ಹೊಡೆದರು. ಗುಜರಾತ್ ಪರ ರಶೀದ್ ಖಾನ್ 32 ರನ್ ನೀಡಿ 2 ವಿಕೆಟ್ ಪಡೆದರು. (ಏಜೆನ್ಸೀಸ್,ಎಸ್.ಎಚ್)