ಕ್ರೀಡೆದೇಶಪ್ರಮುಖ ಸುದ್ದಿ

ಪರ್ಪಲ್ ಕ್ಯಾಪ್ ರೇಸ್‌ ಚಹಾಲ್ ಹಿಂದಿಕ್ಕಿದ ವನಿಂದು ಹಸರಂಗ; ಆರೆಂಜ್ ಕ್ಯಾಪ್‌ ರೇಸ್ ಮುಂಚೂಣಿಯಲ್ಲಿ ಬಟ್ಲರ್

ದೇಶ(ನವದೆಹಲಿ),ಮೇ.20:- ಆರ್‌ ಸಿಬಿಯ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗಾ ಅವರು ಪರ್ಪಲ್ ಕ್ಯಾಪ್ ರೇಸ್‌ ನಲ್ಲಿ ಚಾಹಲ್ ಅವರನ್ನು ಹಿಂದಿಕ್ಕಿದ್ದಾರೆ.
ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಒಂದು ವಿಕೆಟ್ ಪಡೆದ ಕೂಡಲೇ ಅವರು ಈ ಋತುವಿನಲ್ಲಿ ಚಹಾಲ್ ಅವರ ಒಟ್ಟು ವಿಕೆಟ್‌ ಗಳನ್ನು ಸರಿಗಟ್ಟಿದ್ದಾರೆ. ಈ ಮೂಲಕ ಇದೀಗ ಹಸರಂಗ ಅವರಿಗೆ ಪರ್ಪಲ್ ಕ್ಯಾಪ್ ಬಂದಿದೆ. ಮತ್ತೊಂದೆಡೆ, ರಾಜಸ್ಥಾನ ರಾಯಲ್ಸ್‌ ನ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಆರೆಂಜ್ ಕ್ಯಾಪ್‌ ನಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ.
ಬಟ್ಲರ್ ಈ ಋತುವಿನಲ್ಲಿ ಇದುವರೆಗೆ 13 ಪಂದ್ಯಗಳಲ್ಲಿ 52.25 ರ ಬ್ಯಾಟಿಂಗ್ ಸರಾಸರಿ ಮತ್ತು 148.82 ರ ಬಿರುಸಿನ ಸ್ಟ್ರೈಕ್ ರೇಟ್‌ ನಲ್ಲಿ 627 ರನ್ ಗಳಿಸಿದ್ದಾರೆ. ರನ್ ಗಳಿಸುವ ವಿಷಯದಲ್ಲಿ ಅವರು ಇತರ ಬ್ಯಾಟ್ಸ್‌ ಮನ್‌ ಗಳಿಗಿಂತ ಬಹಳ ಮುಂದಿದ್ದಾರೆ. ಬಟ್ಲರ್ ನಂತರ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಮತ್ತು ಆರಂಭಿಕ ಕ್ವಿಂಟನ್ ಡಿ ಕಾಕ್ ಇದ್ದಾರೆ. ಈ ಇಬ್ಬರೂ ಆಟಗಾರರು 500ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.
ನ್ಯಾಟ್ಸ್ ಮನ್ ಗಳ ಪಟ್ಟಿಯಲ್ಲಿ ಕ್ರಮವಾಗಿ ಮೊದಲ ಸ್ಥಾನದಲ್ಲಿ ಜೋಸ್ ಬಟ್ಲರ್, ಎರಡನೇ ಸ್ಥಾನದಲ್ಲಿ ಕೆ.ಎಲ್ ರಾಹುಲ್, ಮೂರು, ನಾಲ್ಕು ಮತ್ತಯ ಐದರಲ್ಲಿ ಕ್ವಿಂಟನ್ ಡಿ.ಕಾಕ್, ಫಾಫ್ ಡು ಪ್ಲೆಸಿಸ್, ಡೇವಿಡ್ ವಾರ್ನರ್ ಇದ್ದಾರೆ.
ಪರ್ಪಲ್ ಕ್ಯಾಪ್ ರೇಸ್ ತುಂಬಾ ಆಸಕ್ತಿದಾಯಕವಾಗಿದೆ. ಈ ರೇಸ್‌ ನಲ್ಲಿ 20ಕ್ಕೂ ಹೆಚ್ಚು ವಿಕೆಟ್‌ ಗಳನ್ನು ಕಬಳಿಸುವ ಮೂಲಕ ಐವರು ಬೌಲರ್‌ ಗಳಿದ್ದಾರೆ. ವನಿಂದು ಮತ್ತು ಚಹಾಲ್ ಮುಂಚೂಣಿಯಲ್ಲಿದ್ದಾರೆ. ಇಬ್ಬರೂ ಬೌಲರ್‌ ಗಳು ಇಲ್ಲಿಯವರೆಗೆ 24-24 ವಿಕೆಟ್‌ ಗಳನ್ನು ಪಡೆದಿದ್ದಾರೆ. ರಬಾಡ, ಉಮ್ರಾನ್ ಮಲಿಕ್ ಮತ್ತು ಕುಲದೀಪ್ ಯಾದವ್ ಕೂಡ ಇವರಿಗಿಂತ ಕಡಿಮೆ ಏನಿಲ್ಲ.
ವನಿಂದು ಹಸರಂಗ, ಯಜ್ವೇಂದ್ರ ಚಹಾಲ್, ಕಗಿಸೋ ರಬಾಡಾ, ಉಮ್ರಾನ್ ಮಲಿಕ್, ಕುಲದೀಪ್ ಯಾದವ್ ಪಟ್ಟಿಯಲ್ಲಿ ಇದ್ದಾರೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: