ಕರ್ನಾಟಕಪ್ರಮುಖ ಸುದ್ದಿಮನರಂಜನೆ

‘ಕಾನ್ ಫೆಸ್ಟಿವಲ್’ನಲ್ಲಿ ರಘು ದೀಕ್ಷಿತ್ ಗಾನ ಸುಧೆ

ರಾಜ್ಯ(ಬೆಂಗಳೂರು),ಮೇ.20 : ವಿಶ್ವದ ಅತ್ಯಂತ ಪ್ರಸಿದ್ಧ ಸಿನಿಮೋತ್ಸವವಾದ ಕಾನ್ ಫೆಸ್ಟಿವಲ್ ಈಗಾಗಲೇ ಶುರುವಾಗಿದ್ದು. ಇದೀಗ ಕಾನ್ ಫೆಸ್ಟಿವಲ್‌ನಲ್ಲಿ ನಮ್ಮ ಕನ್ನಡದ ಹೆಸರಾಂತ ಗಾಯಕ ರಘು ದೀಕ್ಷಿತ್ ಭಾಗಿಯಾಗುತ್ತಿದ್ದಾರೆ.

ಕಾನ್ ಸಿನಿಮೋತ್ಸವ ಅಂತರಾಷ್ಟೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮದಲ್ಲಿ ಎಲ್ಲಾ ದೇಶದ ಕಲಾವಿದರು ಈ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಕಾನ್ ಸಿನಿಮೋತ್ಸವಕ್ಕೆ ಕನ್ನಡತಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಭಾಗವಹಿಸುತ್ತಿದ್ದು, ಇದೇ ಕಾರ್ಯಕ್ರಮಕ್ಕೆ ಮತ್ತೊಬ್ಬ ಕನ್ನಡಿಗನ ಎಂಟ್ರಿಯಾಗಿದೆ. ಕಾನ್ ಫಸ್ಟಿವಲ್‌ನಲ್ಲಿ ಕನ್ನಡದ ಕಂಪನ್ನು ಹಾಡಿನ ಮೂಲಕ ಪಸರಿಸಲು ಹೆಸರಾಂತ ಗಾಯಕ ರಘು ದೀಕ್ಷಿತ್ ಭಾಗಿಯಾಗುತ್ತಿದ್ದಾರೆ.

ಕಾನ್ ಅಂತಹ ಅಂತರಾಷ್ಟೀಯ ಮಟ್ಟದ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರುವುದು ಕನ್ನಡಗರಿಗೆ ಹೆಮ್ಮೆಯ ವಿಚಾರವಾಗಿದೆ. ಗಾಯಕ, ಗೀತ ರಚನೆಕಾರ ರಘು ದೀಕ್ಷಿತ್ ಕಾನ್ ಫೆಸ್ಟಿವಲ್‌ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮೇ 21ರಂದು ಕಾನ್ ಸಿನಿಮೋತ್ಸವದಲ್ಲಿ ರಘು ದೀಕ್ಷಿತ ಕನ್ನಡ ಹಾಡುಗಳನ್ನು ಹಾಡಿ ತಮ್ಮ ಹಾಡುಗಾರಿಕೆಯನ್ನು ಪ್ರದರ್ಶಿಸಲಿದ್ದಾರೆ.

ರಘು ದೀಕ್ಷಿತ್ ಇದೇ ಮೊದಲ ಬಾರಿಗೆ ಕಾನ್ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿದ್ದು, ದೇಸಿ ಹಾಡುಗಳ ಮೂಲಕ ಗಮನ ಸೆಳೆಯಲಿದ್ದಾರೆ. ಸದ್ಯ ಗಾಯಕ ರಘು ದೀಕ್ಷಿತ್ ಯಾವೆಲ್ಲ ಹಾಡುಗಳನ್ನು ಹಾಡಲಿದ್ದಾರೆ ಎನ್ನುವುದು ಇದೀಗ ಕುತೂಹಲ ಮೂಡಿಸಿದೆ.(ಎಸ್.ಎಂ)

Leave a Reply

comments

Related Articles

error: