ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಕಾರು ಹೊಡೆದ ರಭಸಕ್ಕೆ ಮೇಲಕ್ಕೆ ಹಾರಿದ ಪಾದಚಾರಿಗಳು : ಓರ್ವ ಸಾವು

ರಾಜ್ಯ(ಬೆಂಗಳೂರು),ಮೇ.20 : ಕಿರುತೆರೆ ಅಸಿಸ್ಟೆಂಟ್ ಡೈರೆಕ್ಟರ್ ಒಬ್ಬ ಕಾರಿನಲ್ಲಿ ವೇಗವಾಗಿ ಬಂದು ನಾಲ್ವರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿರು ಹಿನ್ನಲೆ ಒಬ್ಬ ಪಾದಾಚಾರಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕತ್ರಿಗುಪ್ಪೆ ಬಳಿ ನಡೆದಿದೆ.

ಇಂದು ಅಪರಾಹ್ನ ಶೂಟಿಂಗ್ ಮುಗಿಸಿಕೊಂಡು ಬನಶಂಕರಿ ಕಡೆಯಿಂದ ಕಾರಿನಲ್ಲಿ ವೇಗವಾಗಿ ಬಂದ ಕಿರುತೆರೆ ಅಸಿಸ್ಟೆಂಟ್ ಡೈರೆಕ್ಟರ್ ಮುಖೇಶ್, ನಾಲ್ವರು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಪಾದಾಚಾರಿಗಳು ಮೇಲಕ್ಕೆ ಚಿಮ್ಮಿದ್ದಾರೆ. ಅಲ್ಲದೇ ಸ್ಥಳದಲ್ಲೇ ಇದ್ದ ಇನ್ನೊಂದು ಕಾರು ಹಾಗೂ ಬೈಕಿಗೂ ಡಿಕ್ಕಿ ಹೊಡೆದಿದ್ದಾರೆ.

ಇಟ್ಟಮಡು ಬಳಿ ಇಳಿಜಾರು ಇದ್ದ ಕಾರಣ ಕಾರು ವೇಗವಾಗಿ ಬಂದು ಪಾದಾಚಾರಿಗಳಿಗೆ ಡಿಕ್ಕಿ ಹೊಡೆದಿದ್ದು, ಘಟನೆಯಲ್ಲಿ ಸುರೇಶ್ ಮೃತಪಟ್ಟಿದ್ದು, ಕಾರು ಚಾಲಕ ಮುಖೇಶ್ ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಯೇ ಕಾರಣ ಎಂದು ಪಶ್ಚಿಮ ವಿಭಾಗ ಸಂಚಾರಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.

ಗಾಯಾಳುಗಳಲ್ಲಿ ಮೂವರು ಕ್ಯಾಟರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದು, ಒಬ್ಬ ವಿದ್ಯಾರ್ಥಿ ಎಂಬುದು ತಿಳಿದುಬಂದಿದೆ. ಬನಶಂಕರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಚಾಲಕ ಮುಖೇಶ್‌ನನ್ನು ಪೊಲೀಸರು ಬಂಧಿಸಿದ್ದು, ಆತನ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.(ಎಸ್.ಎಂ)

Leave a Reply

comments

Related Articles

error: