ಮೈಸೂರು

ಶಿಷ್ಟಾಚಾರ ಉಲ್ಲಂಘಿಸಿ ಗುದ್ದಲಿ ಪೂಜೆ : ಮತ್ತೆ ವಿವಾದಕ್ಕೆ ಸಿಲುಕಿದ ಬೋಸ್

ಮೈಸೂರು, ಮೇ.13;- ಇಲ್ಲಿ ಯಾವುದೇ ಚಿತ್ರೀಕರಣ ನಡೆಯುತ್ತಿಲ್ಲ. ಆದರೂ ಕಣ್ಣಿಗೆ ಕಪ್ಪು ಗಾಗಲ್ ಹಾಕಿ, ನೀಟ್ ಆಗಿ ಶೂ ಧರಿಸಿ ಹಾರೆ ಹಿಡಿದು ಪೋಸ್ ಕೊಡುತ್ತಿದ್ದಾರೆ ಅಂದು ಕೊಳ್ಳದಿರಿ. ಇದು ಮೈಸೂರು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪನವರ ಪುತ್ರ ಸುನಿಲ್ ಬೋಸ್ ಶಿಷ್ಟಾಚಾರ ಉಲ್ಲಂಘಿಸಿ ವಿವಿಧ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿದ್ದಾರೆ. ತಂದೆಯ ಅಧಿಕಾರವನ್ನು ಉಪಯೋಗಿಸಿ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ ಎನ್ನಲಾಗುತ್ತಿದೆ.

ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದದ್ದೇ ತಡ ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ದರ್ಪ ಮತ್ತೆ ಹೆಚ್ಚಾಗಿದೆ. ಶಿಷ್ಟಾಚಾರ ಉಲ್ಲಂಘಿಸಿ ಅಪ್ಪನ ಅಧಿಕಾರವನ್ನು ಚಲಾಯಿಸುತ್ತಿರುವ ಸುನಿಲ್ ಬೋಸ್ ಶನಿವಾರ ಬೂಟು ಕಾಲಿನಲ್ಲೇ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಮೈಸೂರು ಜಿಲ್ಲೆಯ ತಿ. ನರಸೀಪುರ ತಾಲೂಕಿನ ತುರುಗನೂರು ಮತ್ತು ಯಾಚೇನಹಳ್ಳಿ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬೋಸ್ ಶನಿವಾರ ಗುದ್ದಲಿಪೂಜೆ ನೆರವೇರಿಸಿದ್ದಾರೆ. ಕಾರ್ಯಕರ್ತರ ಜೊತೆ ಮಾತನಾಡುತ್ತಾ ಹಾರೆ ಮೇಲೆ ಕೈಯ್ಯಿಟ್ಟು ಪೂಜಾ ಸಾಮಗ್ರಿಗಳ ಬಳಿ ಶೂ ಧರಿಸಿದ ಕಾಲಿನಲ್ಲಿ ನಿಂತು ಫೋಸ್ ನೀಡಿದ್ದಾರೆ. ಬೋಸ್ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುನಿಲ್ ಬೋಸ್ ಟಿ.ನರಸೀಪುರ ಕ್ಷೇತ್ರದಲ್ಲಿ ದರ್ಬಾರ್ ನಿಲ್ಲುತ್ತಲೇ ಇಲ್ಲ ಎಂದು ಗೊಣಗಿಕೊಂಡಿದ್ದಾರೆ. ಅಧಿಕಾರಿಗಳು ಕೂಡಾ ಶಿಷ್ಟಾಚಾರವನ್ನು ಉಲ್ಲಂಘಿಸಿದ್ದಾರೆ ಎನ್ನಲಾಗುತ್ತಿದೆ. – (ವರದಿ: ಆರ್.ವಿ,ಎಸ್.ಎಚ್)

 

Leave a Reply

comments

Related Articles

error: