ಪ್ರಮುಖ ಸುದ್ದಿಮೈಸೂರು

ಮಳೆಯಿಂದ ಅನಾಹುತವಾಗಿದೆ, ಜಿಲ್ಲಾ ಮಂತ್ರಿಗಳು ಯಾಕೆ ಎಲ್ಲೂ ಹೋಗುತ್ತಿಲ್ಲ : ಸ್ವಪಕ್ಷದ ಸಚಿವರ ವಿರುದ್ಧ ಹೆಚ್.ವಿಶ್ವನಾಥ್ ಕಿಡಿ

ಮೈಸೂರು,ಮೇ.21:-  ಜಿಲ್ಲೆಯಲ್ಲಿ ಮಳೆಯಿಂದ ಅನಾಹುತವಾಗಿದೆ ಮೈಸೂರು ಜಿಲ್ಲಾ ಮಂತ್ರಿ ಎಲ್ಲಿ ಹೋದ್ರು?  ತಾವು ಖುದ್ದು ಬಂದು ನೋಡಬೇಕು ತಾನೇ, ಜಿಲ್ಲಾ ಮಂತ್ರಿಗಳು ಯಾಕೆ ಎಲ್ಲೂ ಹೋಗುತ್ತಿಲ್ಲ?ಏನಾಗಿದೆ ನಿಮಗೆ ಎಂದು ಸ್ವಪಕ್ಷದ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದರು.

ಮೈಸೂರಿನಲ್ಲಿಂದು ಮಾದ್ಯಮಗಳಿಗೆ ಪ್ರತಿಕ್ರಿಯಿಸಿ ಕೊಳಚೆ ಪ್ರದೇಶದಲ್ಲಿ ಏನಾಗುತ್ತಿದೆ, ತಾಲೂಕುಗಳಲ್ಲಿ ಏನಾಗುತ್ತಿದೆ ಹೋಗಿ ನೋಡಬೇಕು. ಜಿಲ್ಲಾ ಮಂತ್ರಿಗಳು ಪ್ರವಾಸ ಮಾಡಬೇಕು. ತಕ್ಷಣ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಬೇಕು. ಸಿಎಂ ಎಲ್ಲಾ ಕಡೆ ಹೋಗಿ ಜನರ ಸಂಕಷ್ಟ ಆಲಿಸುತ್ತಿದ್ದಾರೆ. ಮೋದಿ ಮೈಸೂರನ್ನು ಪ್ಯಾರೀಸ್ ಮಾಡುತ್ತೇವೆ ಎಂದು ಹೇಳಿದ್ದರು. ಈಗ ಮೈಸೂರು ಕೊಳಚೆಯಾಗುತ್ತಿದೆ. ಇದನ್ನೂ ಕೂಡ ಮೋದಿ ಗಮನಿಸಬೇಕು. ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣ ಕೊಡುವಂತೆ ರಾಜ್ಯದ ಮಂತ್ರಿಗಳು ನೀವು ಕೇಳಬೇಕು ಎಂದು ಆಗ್ರಹಿಸಿದರು.

ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ರಾಜಕೀಯ ಸಂಘರ್ಷವಲ್ಲ. ನಾವೆಲ್ಲ ಸೇರಿ ಶಿಕ್ಷಣ ವ್ಯವಸ್ಥೆ ಹಾಳು ಮಾಡುತ್ತಿದ್ದೇವೆ. ಶಿಕ್ಷಣ ತಜ್ಞರಲ್ಲದವರು  ಪಠ್ಯಪುಸ್ತಕ ತಯಾರಿ ಅಧ್ಯಕ್ಷರಾಗೋದು ದುರಂತ. ರೋಹಿತ್ ಚಕ್ರತೀರ್ಥ ಯಾರಪ್ಪ ? ಸಂಘಪರಿವಾರದ ಕಾರ್ಯಕರ್ತ ನೀವು. ಪಠ್ಯಪುಸ್ತಕದಲ್ಲಿ ಕೇಸರೀಕರಣ ನುಸುಳುತ್ತಿರುವುದು ಅಪಾಯಕಾರಿ. ಧರ್ಮ ಆಧಾರಿತ ಪಠ್ಯ ಯಾವುದೇ ಕಾರಣಕ್ಕೂ ಬೇಡ. ಯಜ್ಞಕುಂಡ ಯಾವ ಕಡೆ ಇರಬೇಕು ಎಂಬ ಪಠ್ಯ ಬೋಧನೆ ಯಾರಿಗೆ ಬೇಕು? ಸಾಮಾಜಿಕ ಕ್ರಾಂತಿಯ ಹರಿಕಾರ ನಾರಾಯಣಗುರು ಪಠ್ಯ  ಕೈಬಿಡುವುದು ತಪ್ಪು  ಬಾಯಿಗೆ ಬಂದ ಹಾಗೆ ಯಾರಯಾರದ್ದೋ ಪಠ್ಯ ಸೇರಿಸಿದರೆ ಹೇಗೆ?  ಟಿಪ್ಪು ಮುಂದೆ ಮಂಡಿಯೂರಿದ್ದು ಯಾರು ಗೊತ್ತಾ? ಟಿಪ್ಪು ಬ್ರಿಟಿಷರ ವಿರುದ್ಧ ಮಂಡಿ ಊರಲಿಲ್ಲ. ಮಕ್ಕಳನ್ನು ಒತ್ತೆ ಇಟ್ಟು ರಾಜ್ಯ ರಕ್ಷಣೆ ಮಾಡಿದದಾತ ಟಿಪ್ಪು.  ಹೆಗಡೆವಾರ್ ಯಾರು ಎಂದು ಗೊತ್ತಿಲ್ಲ. ಹೆಗಡೆವಾರಿಗೂ ಟಿಪ್ಪುಗೂ ಹೋಲಿಕೆ ಮಾಡುತ್ತಿದ್ದೀರಾ ನೀವು, ಅದು ಸರಿ ಅಲ್ಲ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಚರಿತೆ ಗೊತ್ತಿಲ್ವಾ    ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒತ್ತುವರಿ ತೆರವು ಕುರಿತು ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಒತ್ತುವರಿ ತೆರವು ಆರಂಭಿಸಿದ್ದರು. ಆ ಜಾಗದಲ್ಲಿ ಶ್ರೀಮಂತ ನಟ, ರಾಜಕಾರಣಿ ಮನೆ ಇದೆ ಅಂತ ನಿಲ್ಲಿಸಿದ್ದರು. ಶ್ರೀಮಂತರ ಮನೆ ಮಾತ್ರ ಹಾಗೆಯೇ ಉಳಿಯಿತು. ಬಡವರು ಮಾತ್ರ ಮನೆ ಕಳೆದುಕೊಂಡು ಬೀದಿಗೆ ಬಿದ್ದರು ಎಂದು ವಾಗ್ದಾಳಿ ನಡೆಸಿದರು.  (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: