ಮೈಸೂರು

ಕಾರ್ಮಿಕರಿಗೆ ಕನಿಷ್ಠ ವೇತನ ಸೌಲಭ್ಯ ನೀಡದೆ ವಂಚನೆ : ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ಮೇ.21:- ಕಳೆದ ಹತ್ತು ವರ್ಷಗಳಿಂದ ಭಾರತೀಯ ರೈಲ್ವೆಯ ಮೈಸೂರು ವಿಭಾಗದಲ್ಲಿ ಕಾಂಟ್ರಾಕ್ಟ್ ಲೇಬರ್ ಹೌಸ್ ಕೀಪಿಂಗ್ ವಿಭಾಗದಲ್ಲಿ  ಕಾರ್ಯನಿರ್ವಹಿಸುತ್ತಿರುವ ಸುಶೀಲಮ್ಮ  ಮತ್ತು ಇತರರಿಗೆ ಕನಿಷ್ಠ ವೇತನ, ಇಎಸ್ ಐ, ಪಿ.ಎಫ್ ಸೌಲಭ್ಯ ನೀಡದೆ ಕಾಂಟ್ರಾಕ್ಟ್ ದಾರರಾದ ನಿಮಿಷಾಂಬಾ ಎಂಟರ್ ಪ್ರೈಸಸ್ ಮಾಲೀಕರು ವಂಚಿಸಿದ್ದಾರೆಂದು ಆರೋಪಿಸಿ, ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಕರ್ನಾಟಕ ಸ್ಟೇಟ್ ರೈಲ್ವೆ ಕಾಂಟ್ರಾಕ್ಟ್ ಮಜ್ದೂರ್ ಸಂಘ ಪ್ರತಿಭಟನೆ ನಡೆಸಿದೆ.

ಮೈಸೂರಿನಲ್ಲಿಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಿಭಟನಾಕಾರರು ಕನಿಷ್ಠ ವೇತನ, ಇಎಸ್ ಐ, ಪಿಎಫ್ ಸೌಲಭ್ಯವನ್ನು ನೀಡದೇ ವಂಚಿಸಲಾಗಿದ್ದು ಇದನ್ನು ಪ್ರಶ್ನಿಸಿದ ಕಾರ್ಮಿಕರಿಗೆ ಕಾಂಟ್ರಾಕ್ಟ್ ಸೂಪರ್ ವೈಸರ್ ಆದ ಕೃಷ್ಣಮೂರ್ತಿ ಅಲಿಯಾಸ್ ಮಣಿ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆಯೊಡ್ಡಿದ್ದಾನೆ. ಹದಿನಾಲ್ಕು ಕಾರ್ಮಿಕರುಗಳಿಗೆ ಐಡಿಬಿಐ ಬ್ಯಾಂಕ್ ಮಂಡ್ಯ ಶಾಖೆಯಲ್ಲಿ ಖಾತೆಗಳನ್ನು ತೆರೆದು ಎಟಿಎಂ ಕಾರ್ಡುಗಳನ್ನು ಪಡೆದುಕೊಂಡು ಕಾಂಟ್ರಾಕ್ಟರ್ ದಾರರೇ ಖಾತೆಗಳಿಂದ ಹಣಪಡೆದುಕೊಂಡಿರುತ್ತಾರೆ. ನಿಯಮಗಳ ಪ್ರಕಾರ ಯಾವುದೇ ಕಾಂಟ್ರಾಕ್ಟರ್ ಕಾರ್ಮಿಕರುಗಳಿಗೆ ವೇತನ ಪಾವತಿಸಲು ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಖಾತೆ  ತೆರೆದು ಈ ಖಾತೆಗೆ ಹಣವನ್ನು ಜಮಾಮಾಡಬೇಕು. ಕಾರ್ಮಿಕರುಗಳಿಗೆ ಕನಿಷ್ಠ ವೇತನ 12,826ರೂ.ಗಳಾಗಿದ್ದು, ಕಂಟ್ರಾಕ್ಟರ್ ಕಾರ್ಮಿಕರಿಗೆ 6ರಿಂದ 8ಸಾವಿರ ರೂ.ನಗದು ಮಾತ್ರ ನಗದು ರೂಪದಲ್ಲಿ ನೀಡುತ್ತಿದ್ದಾರೆ. ಜೊತೆಗೆ ವೇತನ ಪಾವತಿಯ ಸಂಬಂಧ ಮಸ್ಟ್ ರೋಲ್ ಮೆಂಟೈನ್ ಮಾಡಿರುವುದಿಲ್ಲ. ಎಲ್ಲಾ ವಿಚಾರಗಳ ಕುರಿತು ಕರ್ನಾಟಕ ಸ್ಟೇಟ್ ರೈಲ್ವೆ ಕಾಂಟ್ರಾಕ್ಟ್ ಮಜ್ದೂರ್ ಸಂಘದ ಮುಖಾಂತರ ಸೆಕ್ಷನ್ 22ಐಡಿ ಆ್ಯಕ್ಟ್ ಅನುಸಾರ ದೂರು ನೀಡಲಾಗಿದೆ ಎಂದರು.

ಇವರ ಮೇಲೆ ಸೂಕ್ತ ಕ್ರಮ ಜರುಗಿಸಿ, ಕಾರ್ಮಿಕರಿಗೆ ಸಲ್ಲಬೇಕಾದ ಹಣವನ್ನು ಕೊಡಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪ್ರಧಾನಕಾರ್ಯದರ್ಶಿ ಕೆ.ನಂಜಪ್ಪ ಬಸವನಗುಡಿ, ಅಧ್ಯಕ್ಷ ಅನಿಲ್ ಮಾರುತಿ ಸೇರಿದಂತೆ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: