ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಶೇ.91.83 ಫಲಿತಾಂಶ

ಮೈಸೂರು, ಮೇ 21:- ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್ 2022ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ.91.83ರಷ್ಟು ಫಲಿತಾಂಶ ಬಂದಿದೆ.

ಒಟ್ಟು 49 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 45 ಮಂದಿ ಉತ್ತೀರ್ಣರಾಗಿದ್ದಾರೆ. ಅತ್ಯುನ್ನತ ಶ್ರೇಣಿಯಲ್ಲಿ 17 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 26 ಹಾಗೂ ದ್ವಿತೀಯ ಶ್ರೇಣಿಯಲ್ಲಿ 2 ವಿದ್ಯಾರ್ಥಿಗಳು ತೇರ್ಗಡೆಯನ್ನು ಹೊಂದಿದ್ದಾರೆ. 100ಕ್ಕೆ 100 ಅಂಕ ಪಡೆದವರಲ್ಲಿ ಕನ್ನಡದಲ್ಲಿ ನಾಲ್ವರು, ಹಿಂದಿಯಲ್ಲಿ ಓರ್ವ ವಿದ್ಯಾರ್ಥಿ, ಗಣಿತದಲ್ಲಿ ಇಬ್ಬರು ವಿದ್ಯಾರ್ಥಿಗಳು, ವಿಜ್ಞಾನದಲ್ಲಿ ಇಬ್ಬರು ಹಾಗೂ ಸಮಾಜದಲ್ಲಿ 7 ಮಂದಿ ವಿದ್ಯಾರ್ಥಿಗಳು ಅಂಕ ಪಡೆದಿರುತ್ತಾರೆ.
ಪ್ರಪ್ರಥಮವಾಗಿ ಯಶ್‍ವಂತ್ ಆರ್. ಎಂಬ ವಿದ್ಯಾರ್ಥಿಯು 608/625 ಅಂಕ ಪಡೆದು ಹಾಗೂ ದ್ವಿತೀಯ ಭಾಷೆ ಕನ್ನಡ, ಹಿಂದಿ, ಗಣಿತ ಹಾಗೂ ಸಮಾಜ ವಿಜ್ಞಾನ ವಿಷಯಕ್ಕೆ 100ಕ್ಕೆ 100 ಅಂಕ ಪಡೆದು ಶಾಲೆಯ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾನೆ.
ಅತ್ಯುನ್ನತ ಶ್ರೇಣಿಯಲ್ಲಿ ಯಶ್‍ವಂತ್ ಆರ್. (608/625), ಅನುಷ ಜಿ. (607/625), ಪ್ರಮೋದ್ ಪಿ (599/625), ಹರೀಶ್ ಎಸ್. (599/625), ಚೈತನ್ಯಶ್ರೀ ಎಲ್ (583/625), ಪ್ರೀತಿ ಎಂ (581/625), ಶ್ರೀಲಕ್ಷ್ಮಿ ಎಂ. (578/625) ಮೇಘನಾ ಜೆ. (577/625) ಸೋಹಾ ಫಾತಿಮಾ (577/625) ಹರ್ಷವರ್ಧನ್ ಎನ್. (570/625) ಸಾಗರ್ ಬಿ. (566/625) ತೇಜಸ್ವಿನಿ ಎಸ್. (565/625) ಮಣಿಕಂಠ (563/625) ಪ್ರಗತಿ ಪಂಡಿತ್ (551/625) ಭೂಮಿಕ ಎಸ್. (551/625) ಮಂಜುಳ ಎಸ್. (549/625) ಅಭಿನಂದನ್ ಸಿ. (547/625).

ಈ ವಿದ್ಯಾರ್ಥಿಗಳ ಸಾಧನೆಯನ್ನು ಮೆಚ್ಚಿ ಸಂಸ್ಥೆಯ ಅಧ್ಯಕ್ಷ ಟಿ.ರಂಗಪ್ಪ, ಮುಖ್ಯೋಪಾಧ್ಯಾಯ ಫಾರೂಕ್ ಮಹಮದ್ ಹಾಗೂ ಆಡಳಿತ ಮಂಡಳಿ ಅಭಿನಂದಿಸಿದೆ. (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: