ಕರ್ನಾಟಕಪ್ರಮುಖ ಸುದ್ದಿ

ಮಣ್ಣು ಉಳಿಸಿ ಅಭಿಯಾನಕ್ಕೆ ಮಾಜಿ ಮುಖ್ಯಮಂತ್ರಿಗಳ ಬೆಂಬಲ

ರಾಜ್ಯ(ಬೆಂಗಳೂರು),ಮೇ.23 : ಭೂಮಿ ಮತ್ತು ಮಣ್ಣಿನ ಸಂರಕ್ಷಣೆಯ ಸಲುವಾಗಿ ಸದ್ಗುರು ಜಗ್ಗಿ ವಾಸುದೇವ್ ಮಣ್ಣು ಉಳಿಸಿ ಅಭಿಯಾನವನ್ನು ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿಯಲ್ಲಿ ಚಾಲನೆ ನೀಡಿದ್ದರು. ಇದೀಗ ಈ ಅಭಿಯಾನಕ್ಕೆ ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಬೆಂಬಲವನ್ನು ನೀಡಲು ಒಗ್ಗೂಡಿದ್ದಾರೆ.

ಸದ್ಗುರುಗಳು ಪ್ರಸ್ತುತ 100-ದಿನಗಳ, 30,000-ಕಿಮೀ ಏಕಾಂಗಿ ಮೋಟಾರ್ಸೈಕಲ್ ಪ್ರಯಾಣದಲ್ಲಿ ಯುರೋಪ್, ಮಧ್ಯ ಏಷ್ಯಾ ಮತ್ತು ಮಧ್ಯ ಪ್ರಾಚ್ಯದಾದ್ಯಂತ 27 ದೇಶಗಳಲ್ಲಿ ಮಣ್ಣಿನ ಸಂರಕ್ಷಣೆಯನ್ನು ಕೇಂದ್ರೀಕರಿಸುವ ಜಾಗತಿಕ ನೀತಿಗಳಿಗೆ ಒಮ್ಮತವನ್ನು ನಿರ್ಮಿಸಲು ಪ್ರಯಾಣಿಸಿದ್ದಾರೆ.

ಅವರ ಪ್ರಯಾಣವು ಮಾರ್ಚ್ 21 ರಂದು ಲಂಡನ್ನಿಂದ ಪ್ರಾರಂಭವಾಯಿತು. ಈ ಆಂದೋಲನಕ್ಕೆ ಬೆಂಬಲವನ್ನು ಪಡೆಯಲು ಅವರು ಮಾಧ್ಯಮಗಳು ಸೇರಿದಂತೆ ರಾಜಕೀಯ, ವ್ಯಾಪಾರ, ಸಾಮಾಜಿಕ ಮತ್ತು ಸಾಂಸ್ಕೃತಿಕ ನಾಯಕರನ್ನು ಭೇಟಿಯಾಗುತ್ತಿದ್ದಾರೆ ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಗಮನಾರ್ಹಉಪಸ್ಥಿತಿಯನ್ನು ಹೊoದಿರುವ ಸುಪ್ರಸಿದ್ಧವ್ಯಕ್ತಿಗಳನ್ನು ಭೇಟಿ ಮಾಡುತ್ತಿದ್ದಾರೆ.

ಸದ್ಗುರುಗಳ ಯಾತ್ರೆಯು ಈ ವರ್ಷದ ಜೂನ್ನಲ್ಲಿ 19 ರಂದು ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ  ಮುಕ್ತಾಯಗೊಳ್ಳಲಿದೆ. ನಂತರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿಯವರ ಉಪಸ್ಥಿತಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ನಡೆಸಿ ಈ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಲಿದ್ದು. ಈ ಕಾರ್ಯಕ್ರಮದಲ್ಲಿ ಎಲ್ಲಾ ಮಾಜಿ ಮುಖ್ಯಮಂತ್ರಿಗಳು ಮತ್ತು ಹಲವಾರು ಗಣ್ಯರು ಪಾಲ್ಗೊ ಳ್ಳುವ ನಿರೀಕ್ಷೆಯಿದೆ.

ಹಲವಾರು ಜಾಗತಿಕ ನಾಯಕರು ಮತ್ತುಪ್ರಭಾವಿಗಳು, ವಿಜ್ಞಾನಿಗಳು, ಪರಿಸರ ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮಣ್ಣುಉಳಿಸಿ ಚಳುವಳಿಯನ್ನು ಬೆಂಬಲಿಸುತ್ತಿವೆ.(ಎಸ್.ಎಂ)

Leave a Reply

comments

Related Articles

error: