ಕ್ರೀಡೆದೇಶಪ್ರಮುಖ ಸುದ್ದಿವಿದೇಶ

ಗಂಡು ಮಗುವಿನ ತಂದೆಯಾದ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ 

ದೇಶ(ನವದೆಹಲಿ),ಮೇ.23:- ಐಪಿಎಲ್ 2022 ರ ಗ್ರೂಪ್ ಸ್ಟೇಜ್ ನಿಂದ ಹೊರಗುಳಿದಿದ್ದ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಎರಡನೇ ಬಾರಿಗೆ ತಂದೆಯಾಗಿದ್ದಾರೆ.

ಅವರ ಪತ್ನಿ ಮಗನಿಗೆ ಜನ್ಮ ನೀಡಿದ್ದಾಳೆ. ವಿಲಿಯಮ್ಸನ್ ಪತ್ನಿ ಮತ್ತು ಮಗನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.  ಅಭಿಮಾನಿಗಳು, ಕ್ರಿಕೆಟಿಗರವರೆಗೆ ಎಲ್ಲರೂ ಅವರನ್ನು ಅಭಿನಂದಿಸುತ್ತಿದ್ದಾರೆ. ಸುರೇಶ್ ರೈನಾರಿಂದ ಹಿಡಿದು ಗುಜರಾತ್ ಟೈಟಾನ್ಸ್ ಉಪನಾಯಕ ರಶೀದ್ ಖಾನ್, ಜೇಸನ್ ಹೋಲ್ಡರ್, ಡೇವಿಡ್ ವಾರ್ನರ್, ಬ್ರೆಂಡನ್ ಮೆಕಲಮ್ ಸೇರಿದಂತೆ ಎಲ್ಲಾ ಕ್ರಿಕೆಟಿಗರು ಸಾಮಾಜಿಕ ಮಾಧ್ಯಮಗಳ ಮೂಲಕ ಅವರನ್ನು ಅಭಿನಂದಿಸಿದ್ದಾರೆ.

ಐಪಿಎಲ್ 2022ರ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ವಿಲಿಯಮ್ಸನ್ ತಾಯ್ನಾಡಿಗೆ ಮರಳಿದ್ದರು. ಅವರು ತನ್ನ ಹೆಂಡತಿಯೊಂದಿಗೆ ಸಮಯ ಕಳೆಯಲು ಬಯಸಿದ್ದರು. ವಿಲಿಯಮ್ಸನ್ ನಾಯಕತ್ವದಲ್ಲಿ ಹೈದರಾಬಾದ್ ತಂಡವು ವಿಶೇಷವಾದದ್ದೇನೂ ಸಾಧಿಸಿಲ್ಲ. ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹೈದರಾಬಾದ್ ತಂಡವನ್ನು 5 ವಿಕೆಟ್‌ ಗಳಿಂದ ಸೋಲಿಸಿದೆ. ಈ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಐಪಿಎಲ್ 2022ರಲ್ಲಿ ಹೈದರಾಬಾದ್ 14 ಪಂದ್ಯಗಳನ್ನು ಆಡಿದ್ದು, 6ರಲ್ಲಿ ಗೆದ್ದು 8ರಲ್ಲಿ ಸೋತಿತ್ತು. ಅಂಕಪಟ್ಟಿಯಲ್ಲಿ ತಂಡ 8ನೇ ಸ್ಥಾನ ಗಳಿಸಿದೆ.

ವಿಲಿಯಮ್ಸನ್ ತನ್ನ ಪತ್ನಿ ಮತ್ತು ಮಗಳೊಂದಿಗೆ ನವಜಾತ ಶಿಶುವಿನ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. “ವೆಲ್ ಕಂ ಲಿಟ್ಲ್ ಮ್ಯಾನ್” ಎಂದು ಬರೆದಿದ್ದಾರೆ. ವಿಲಿಯಮ್ಸ ನ್ ಮೊದಲು 2020 ರಲ್ಲಿ ತಂದೆಯಾದರು, ಅವರ ಪತ್ನಿ ಸಾರಾ ಮಗಳಿಗೆ ಜನ್ಮ ನೀಡಿದ್ದರು. ಐಪಿಎಲ್ 15ನೇ ಸೀಸನ್ ನಲ್ಲೂ ವಿಲಿಯಮ್ಸನ್ ತೋರಿದ ಪ್ರದರ್ಶನ ವಿಶೇಷವೇನಲ್ಲ. ಅವರು 13 ಪಂದ್ಯಗಳಲ್ಲಿ 20 ರ ಸರಾಸರಿಯಲ್ಲಿ 216 ರನ್ ಗಳಿಸಿದರು. ಈ ಅವಧಿಯಲ್ಲಿ ಅವರು ಕೇವಲ 1 ಅರ್ಧಶತಕ ಗಳಿಸಿದರು. ನಾಯಕತ್ವದಲ್ಲಿಯೂ ಅವರು ಅಷ್ಟೇನೂ ಶೈನ್ ಆಗಿಲ್ಲ. ಹೈದರಾಬಾದ್ ಅಗ್ರ 4ಕ್ಕೆ ಹೋಗುವ ಅವಕಾಶವಿತ್ತು, ಆದರೆ ತಂಡವು ಕಳೆದ 7 ಪಂದ್ಯಗಳಲ್ಲಿ ಸೋತಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: