ಕರ್ನಾಟಕಪ್ರಮುಖ ಸುದ್ದಿ
ಬೆಳ್ಳಿ ಅಂಗಡಿಯಲ್ಲಿ ಕನ್ನ ಹಾಕಿದ್ದ ಆರೋಪಿಗಳ ಬಂಧನ
ರಾಜ್ಯ(ಬೆಂಗಳೂರು),ಮೇ.23 : ಬೆಳ್ಳಿ ಅಂಗಡಿಯಲ್ಲಿ ಬಿಸ್ಕೇಟ್ ಕನ್ನ ಹಾಕಿದ್ದ ಆರೋಪಿಗಳನ್ನ ಬಂಧಿಸಲಾಗಿದ್ದು, ಕೃತ್ಯ ನಡೆದ 4 ಗಂಟೆಯೊಳಗೆ ಆರೋಪಿಗಳನ್ನ ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ದಿನಾಂಕ 21ರ ಶನಿವಾರ ರಾತ್ರಿ ಈ ಘಟನೆ ನಡೆದಿತ್ತು, ಆರೋಪಿಗಳಾದ ರಾಜೇಶ್,ರಾಹುಲ್,ಮಧು ಬಂಧಿತ ಆರೋಪಿಗಳಾಗಿದ್ದು, ಸಿಸಿಟಿವಿ ಮೇಲೆ ತಿರುಗಿಸಿ ಕಳ್ಳತನ ಮಾಡಿದ್ದರು.
ಚಾಮರಾಜಪೇಟೆ ಪೊಲೀಸರಿಂದ ಮೂವರ ಬಂಧಿಸಲಾಗಿದ್ದು, ಪ್ರಮುಖ ಆರೋಪಿ ರಾಹುಲ್ ಜೈನ್ ಬಟ್ಟೆ ವ್ಯಾಪರದಲ್ಲಿ ನಷ್ಟ ಆಗಿತ್ತು. ಗಾರ್ಮೆಂಟ್ಸ್ ವ್ಯವಹಾರ ಮಾಡುತ್ತಿದ್ದ. ಅಂಗಡಿ ಮಾಲೀಕರಿಗೆ ಉತ್ತಮ್ ಜೈನ್ ಹಾಗೂ ರಾಹುಲ್ ಜೈನ್ ಪರಿಚಿತರಾಗಿದ್ದರು, ಉತ್ತಮ್ ಜೈನ್ ಬೆಳ್ಳಿ ವ್ಯಾಪರ ಮಾಡುತ್ತಿದ್ದ, ಉತ್ತಮ್ ಜೈನ್ ಗೆ ಅಂಗಡಿ ಗ್ರಾಹಕರು ಬೆಳ್ಳಿ ಡಿಜೈನ್ ಗೆ ಆರ್ಡರ್ಮಾಡುತ್ತಿದ್ರು, ಆರ್ಡರ್ ಅನ್ನು ಉತ್ತಮ್ ಜೈನ್ ರಾಹುಲ್ ಜೈನ್ ಗೆ ಮಾಡುವಂತೆ ನೀಡುತ್ತಿದ್ದ. ಉತ್ತಮ್ ಜೈನ್ ಬಳಿ ಬೆಳ್ಳಿ ವಸ್ತುಗಳು ಇದ್ದೆ ಕಳ್ಳತನ ಮಾಡಿದ್ರೆ ಸಾಲ ತೀರಿಸಬಹುದು ಎಂದು ಕೃತ್ಯ ವೆಸಗಲಾಗಿದ್ದು, ಸದ್ಯ ಮೂವರನ್ನ ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದು 9 ಲಕ್ಷ ಮೌಲ್ಯದ ಬೆಳ್ಳಿ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.(ಎಸ್.ಎಂ)