ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಚಿತ್ರವಾಗುತ್ತಿರುವ ‘ಮಾವು ಬೇವು’ ಗೀತಗುಚ್ಚ

ರಾಜ್ಯ(ಬೆಂಗಳೂರು),ಮೇ.23 : ಕನ್ನಡ ಚಿತ್ರರಂಗ, ಸಾಹಿತ್ಯ, ಸಂಗೀತ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ದಿಗ್ಗಜರುಗಳಾದ ಸಾಗಿತಿ ಪದ್ಮಶ್ರೀ ದೊಡ್ಡರಂಗೇಗೌಡ, ಸಂಗೀತ ನಿರ್ದೇಶಕ ಸಿ.ಅಶ್ವತ್ಥ್, ಎಲ್.ವೈದ್ಯನಾಥ್ನ್ ಹಾಗೂ ಹಿನ್ನಲೆ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ರನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ದಿಗ್ಗಜರ ಸಂಗಮದಲ್ಲಿ ಮೂಡಿಬಂದಿರುವ 10 ಹಾಡುಗಳ ‘ಮಾವು ಬೇವು’ ಗೀತಗುಚ್ಚವು ಇದೀಗ ತೆರೆಯ ಮೇಲೆ ಮೂಡಿಬರುವುದಕ್ಕೆ ಸಿದ್ಧವಾಗುತ್ತಿದೆ.

ಶ್ರೀ ಸಾಯಿ ಗಗನ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಸ್.ರಾಜಶೇಖರ್ ನಿರ್ಮಿಸುತ್ತಿರುವ ಸಂಗೀತಮಯ ಚಿತ್ರ ‘ಮಾವು ಬೇವು’. ಕೆಲ ದಿನಗಳ ಹಿಂದಷ್ಟೇ ಚಿತ್ರದ ಮುಹೂರ್ತ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನೆರವೇರಿದೆ. ಮುಹೂರ್ತದಲ್ಲಿ ಪಾಲ್ಗೊಂಡು ಮಂಡಲೇಶ್ವರ ಪರಮಚಾರ್ಯ ಜಗದ್ಗುರು ಶ್ರೀ ಶ್ರೀ ಜಯೇಂದ್ರ ಪುರಿ ಮಹಾಸ್ವಾಮಿ ಆರಂಭ ಫಲಕ ತೋರಿಸಿದರೆ, ಶ್ರೀ ಜಯಣ್ಣ ಕ್ಯಾಮರಾ ಚಾಲನೆ ನೀಡಿದ್ದಾರೆ.

‘ಮಾವು ಬೇವು’ ಆಲ್ಬಂನ ಹಾಡುಗಳ ಸಾರಾಂಶವನ್ನು ಚಿತ್ರ ರೂಪದಲ್ಲಿ ತರುವ ಪ್ರಯತ್ನ ಇದಾಗಿದ್ದು, ಹಾಡುಗಳಿಗೆ ಪೋರಕವಾದ ಕಥೆಯನ್ನು ರಚಿಸಲಾಗಿದೆ. ಹಾಡುಗಳನ್ನು ನೇರವಾಗಿ ಬಳಸಿಕೊಳ್ಳಲಾಗುತ್ತಿರುವುದರಿಂದ ಇದು ಸಿ.ಅಶ್ವತ್ಥ್, ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಲ್.ವೈದ್ಯನಾಥನ್ ಅವರ ಕೊನೆಯ ಚಿತ್ರವಾಗಲಿದೆ. ‘ಮಾವು ಬೇವು’ ಚಿತ್ರವನ್ನು ಸುಚೇಂದ್ರ ಪ್ರಸಾದ್ ನಿರ್ದೇಶಿಸುತ್ತಿದ್ದು, ಉಳಿದಂತೆ ಚಿತ್ರದ ತಾರಾಬಳಗ ಹಾಗೂ ತಾಂತ್ರಿಕ ವರ್ಗದವರ ಆಯ್ಕೆ ಇನ್ನಷ್ಟೇ ಆಹಬೇಕಿದೆ.(ಎಸ್.ಎಂ)

Leave a Reply

comments

Related Articles

error: