ಕರ್ನಾಟಕಪ್ರಮುಖ ಸುದ್ದಿ

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರೋಹಿತ್​​ ಚಕ್ರತೀರ್ಥ ನನ್ನು ನೇಮಿಸಿದ ಬಿಜೆಪಿಗೆ ಮಾನ ಮರ್ಯಾದೆ ಇಲ್ಲ ; ಸಿದ್ದರಾಮಯ್ಯ ಕಿಡಿ

ರಾಜ್ಯ(ಬೆಂಗಳೂರು),ಮೇ.23 : ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್​​ ಚಕ್ರತೀರ್ಥ ಮೇಲೆ ವಿಪಕ್ಷ ನಾಯಕ ಸಿದ್ದರಾಮಯ್ಯ  ಕಿಡಿ ಕಾರಿದ್ದು, ಚಕ್ರತೀರ್ಥ ನೇಮಿಸಿದ ಬಿಜೆಪಿಗೆ ಮಾನ ಮರ್ಯಾದೆ ಇಲ್ಲ ಎಂದು ಟ್ವೀಟ್ ನಲ್ಲಿ ಗುಡುಗಿದ್ದಾರೆ.

2017ರಲ್ಲಿ ಚಕ್ರತೀರ್ಥ ಮಾಡಿದ್ದಾರೆನ್ನಲಾದ ವಿಷಯಗಳನ್ನು ಸಿದ್ದರಾಮಯ್ಯ ಟ್ವೀಟ್ ಉಲ್ಲೇಖಿಸಿ, ನಾಡಗೀತೆಯನ್ನೇ ಈತ ಅವಹೇಳನ ಮಾಡಿದ್ದ, ರಾಷ್ಟ್ರ ಕವಿಯನ್ನು ಗೇಲಿ ಮಾಡಿದ ಕಿಡಿಗೇಡಿ ಈತ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಈತನನ್ನು ಅಧ್ಯಕ್ಷನನ್ನಾಗಿ ಮಾಡಿದ್ದಾರೆ. ಸರ್ಕಾರಕ್ಕೆ ಮಾನ-ಮರ್ಯಾದೆ ಇದ್ದರೆ ಈತನನ್ನು ಕಿತ್ತುಹಾಕಬೇಕು ಎಂದು ಟ್ವೀಟ್​ ಮೂಲಕ ಕಿಡಿಕಾರಿದ್ದಾರೆ.(ಎಸ್.ಎಂ)

Leave a Reply

comments

Related Articles

error: