ಮೈಸೂರು

ಯೋಗ ಪ್ರದರ್ಶ ನಕ್ಕೆ ರೇಸ್ ಕೋರ್ಸ್ ಸ್ಥಳವೇ ಸೂಕ್ತವೆಂದು ಸೂಚಿಸಿದ್ದಾಗಿ ತಿಳಿಸಿದ ಪ್ರತಾಪ್ ಸಿಂಹ

ಮೈಸೂರು,ಮೇ.23:- ಅಂತಾರಾಷ್ಟ್ರೀಯ ಯೋಗ ದಿನ ಜೂ,21ರಂದು ಮೈಸೂರಿಗೆ ಪ್ರಧಾನಿ ಮೋದಿ ಆಗಮಿಸುತ್ತಿರುವುದರಿಂದ ಯೋಗ ಪ್ರದರ್ಶನಕ್ಕೆ ರೇಸ್ ಕೋರ್ಸ್ ಸ್ಥಳವೇ ಸೂಕ್ತ ಎಂದು ಸೂಚನೆ ಕೊಟಿದ್ದೇನೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಅರಮನೆ ಆವರಣದಲ್ಲಿ ಕೇವಲ ಹದಿನೈದು ಸಾವಿರ ಜನರಷ್ಟೇ ಸೇರಬಹುದು. ಆದರೆ ರೇಸ್ ಕೋರ್ಸ್ ನಲ್ಲಿ 1.5ಲಕ್ಷ ಜನರನ್ನು ಸೇರಿಸಬಹುದು. ಈ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದರು.

ಅರಮನೆಯಲ್ಲಿ ಕೇವಲ ಹದಿನೈದು ಸಾವಿರದಷ್ಟು  ಜನರು ಹಿಡಿಯುವುದರಿಂದ ನೂಕುನುಗ್ಗಲಾಗಿ ಬಿಡುತ್ತದೆ. ಸಾಕಷ್ಟು ಜನರಿಗೆ ಯೋಗ ಪ್ರದರ್ಶನದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವುದರಿಂದ ಅಸಮಾಧಾನಕ್ಕೆ ಕಾರಣವಾಗುತ್ತದೆ. ಲಕ್ಷಾಂತರ ಜನರು ಸೇರುವುದರಿಂದ ವೈಯುಕ್ತಿಕವಾಗಿ ರೇಸ್ ಕೋರ್ಸ್ ಸ್ಥಳವೇ ಸೂಕ್ತ ಎಂದು ಸೂಚಿಸಿದ್ದೇನೆ ಎಂದರು.

ಮೋದಿ ಬರುವ ನೆಪದಲ್ಲೇ ಮೈಸೂರಿನ ರಸ್ತೆಗಳಿಗೂ ಸರ್ಕಾರದ ಹಣ ಬಿಡುಗಡೆ ಮಾಡಿಸಿಕೊಡಲಾಗುತ್ತದೆ. ಈ ಕುರಿತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಕ್ರಮವಹಿಸಿದ್ದಾರೆ. ಮುಖ್ಯಮಂತ್ರಿಗಳು ವಿದೇಶ ಪ್ರವಾಸದಿಂದ ಮರಳಿದ ಬಳಿಕ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು. ಯೋಗ ಪ್ರದರ್ಶನದ ಗಿನ್ನೆಸ್ ದಾಖಲೆಗೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಸೂಕ್ತ ತಯಾರಿ ಬೇಕಾಗಲಿದೆ.  8ನೇ ತರಗತಿಯಿಂದ ಪದವಿಯವರೆಗಿನ ವಿದ್ಯಾರ್ಥಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕು ಅಂದುಕೊಂಡಿದ್ದೇವೆ.  ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ಮಾತನಾಡುವುದಾಗಿ ತಿಳಿಸಿದರು.

ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅಧಿಕಾರಿಗಳನ್ನು ಕರೆದು ಸಭೆ ನಡೆಸಲು ಸಾಧ್ಯವಿಲ್ಲ. ಜನಪ್ರತಿನಿಧಿಗಳು ನಾವು ಏನು ಸಿದ್ಧತೆ ನಡೆಸಬೇಕು ಅಂತ ಶಾಲೆ ಕಾಲೇಜುಗಳು, ಯೋಗ ಸಂಸ್ಥೆಗಳನ್ನು ಕರೆದು ಸದ್ಯದಲ್ಲಿಯೇ ಸಭೆ ಮಾಡುತ್ತೇವೆ.  ಚುನಾವಣೆ ಇರುವುದರಿಂದ ಚುನಾವಣಾ  ಪ್ರಕ್ರಿಯೆ ಮುಗಿಸಿ ಬಳಿಕ ಮಾಡುತ್ತೇವೆ ಎಂದು ತಿಳಿಸಿದರು.

ಗ್ಯಾಸ್ ಪೈಪ್ ಲೈನ್ ಅಳವಡಿಕೆ ಕುರಿತು ಪ್ರತಿಕ್ರಿಯಿಸಿ ಮೈಸೂರು ಮಹಾನಗರ ಪಾಲಿಕೆಯಿಂದ ಆಡಳಿತಾತ್ಮಕ ಒಪ್ಪಿಗೆ ದೊರಕಿದೆ. ಹತ್ತು ಕೋಟಿ ಮುಂಗಡ ಹಣ ಪಾವತಿಸಿ ಕೆಲಸ ಆರಂಭಿಸಲು ಸೂಚಿಸಲಾಗಿದೆ. ಇನ್ನೊಂದು ತಿಂಗಳಿನಲ್ಲಿ ಕೆಲಸ ಆರಂಭಿಸಲು ಆದೇಶ ಹೊರಡಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಗ್ಯಾಸ್ ಪೈಪ್ ಲೈನ್ ಕೆಲಸ ಆರಂಭವಾಗತ್ತೆ. ಮುಂದಿನ ಮಾರ್ಚ್ ಒಳಗೆ  ಗ್ಯಾಸ್ ಪೈಪ್ ಲೈನ್ ಕಾಮಗಾರಿ ಸಂಪೂರ್ಣ ಮುಗಿಯಲಿದೆ. 500ಮೀಟರ್ ವ್ಯಾಪ್ತಿಯ ಮೊದಲ ಹಂತದ ಗ್ಯಾಸ್ ಪೈಪ್ ಅಳವಡಿಸಲಾಗಿದೆ. ಮುಂದಿನ ಚುನಾವಣೆಯ ವೇಳೆಗೆ ಮನೆಮನೆಗೆ ಪೈಪ್ ಲೈನ್ ಮೂಲಕ ಗ್ಯಾಸ್ ಸಂಪರ್ಕವಾಗಲಿದೆ ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

 

 

Leave a Reply

comments

Related Articles

error: