
ದೇಶಪ್ರಮುಖ ಸುದ್ದಿ
ಕಬ್ಬಿಣದ ರಾಡ್ ತುಂಬಿದ ಟ್ರಕ್ ಪಲ್ಟಿ : 8 ಮಂದಿ ಕಾರ್ಮಿಕರ ಸಾವು
ದೇಶ(ಬಿಹಾರ),ಮೇ.23 : ಕಬ್ಬಿಣದ ರಾಡ್ ತುಂಬಿದ ಟ್ರಕ್ ಪಲ್ಟಿಯಾದ ಪರಿಣಾಮ 16 ಕಾರ್ಮಿಕರಲ್ಲಿ 8 ಮಂದಿ ಸಾವನ್ನಪ್ಪಿದ ಘಟನೆ ಬಿಹಾರದ ಪೂರ್ಣಿಯಾದಲ್ಲಿ ಸಂಭವಿಸಿದೆ.
ಕಾರ್ಮಿಕರೆಲ್ಲರರೂ ರಾಜಸ್ಥಾನದ ನಿವಾಸಿಗಳಾಗಿದ್ದರು. ಕಬ್ಬಿಣದ ರಾಡ್ ತುಂಬಿದ ಟ್ರಕ್ನಲ್ಲಿದ್ದ 16 ಕಾರ್ಮಿಕರು ತ್ರಿಪುರದಿಂದ ಜಮ್ಮುವಿಗೆ ತೆರಳುತ್ತಿದ್ದರು. ಆದರೆ ಸಿಲಿಗುರಿ ದೆಹಲಿ 4 ಲೇನ್ ರಾಷ್ಟ್ರೀಯ ಹೆದ್ದಾರಿ 57ರ ಜಲಾಲ್ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಕಾಳಿ ದೇವಸ್ಥಾನದ ಬಳಿ ಟ್ರಕ್ ಪಲ್ಟಿಯಾಗಿ ಅಪಘಾತ ಸಂಭವಿಸಿದೆ.
ಈ ಟ್ರಕ್ನಲ್ಲಿ ಕಾರ್ಮಿಕರು ಇದ್ದರು. ಕಾಳಿ ದೇವಸ್ಥಾನದ ಬಳಿ ಟ್ರಕ್ ಪಲ್ಟಿ ಆಗಿದ್ದು, ಟ್ರಕ್ನಲ್ಲಿದ್ದ ಕಬ್ಬಿಣದ ರಾಡ್ಗಳಡಿಯಲ್ಲಿ 8 ಕಾರ್ಮಿಕರು ಸಿಲುಕಿ ಸಾವನ್ನಪ್ಪಿದ್ದಾರೆ.
ಅಧಿಕಾರಿಗಳು ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಮೃತ ದೇಹವನ್ನು ಹೊರತೆಗೆದಿದ್ದಾರೆ. ಗಾಯಾಳುಗಳನ್ನು ರಕ್ಷಿಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ. ಅವರ ಆರೋಗ್ಯದ ಸ್ಥಿತಿ ಸ್ಥಿರವಾಗಿದೆ. ಅಪಘಾತದ ನಂತರ, ಚಾಲಕ ಮತ್ತು ಸಹಾಯಕ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರನ್ನು ಹಿಡಿಯುವ ಪ್ರಯತ್ನ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.(ಎಸ್.ಎಂ)