
ಕರ್ನಾಟಕಪ್ರಮುಖ ಸುದ್ದಿ
ಭಾರೀ ಗಾತ್ರದ ಅಲೆಗೆ ಸಿಕ್ಕಿ ಮೀನುಗಾರಾರ ದೋಣಿ ಮುಳುಗಡೆ : ಸ್ಥಳೀಯ ಮೀನುಗಾರರಿಂದ ರಕ್ಷಣೆ
ರಾಜ್ಯ(ಉಡುಪಿ),ಮೇ.23 : ಭಾರೀ ಗಾತ್ರದ ಅಲೆಗೆ ಸಿಕ್ಕಿ ಮೀನುಗಾರಾರ ದೋಣಿ ಮುಳುಗಡೆಯಾಗಿದ್ದು, ದೋಣೀಯಲ್ಲಿದ್ದ ಐವರು ಮೀನುಗಾರರನ್ನು ರಕ್ಷಿಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ಕಡಲ ತೀರದಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿಶಿರೂರಿನ ಕಡಲ ತೀರದಲ್ಲಿ ಈ ಘಟನೆ ನಡೆದಿದ್ದು, ಮೀನುಗಾರರು ಮೀನುಗಾರಿಕೆಗೆಂದು ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದರು. ಈ ವೇಳೆ ಭಾರಿ ಗಾತ್ರದ ದೋಣಿ ಸಮುದ್ರ ಅಲೆಯ ಹೊಡೆತಕ್ಕೆ ಮುಳುಗಿದೆ. ತಕ್ಷಣ ಅಲ್ಲೇ ಮತ್ತೊಂದು ದೋಣಿಯಲ್ಲಿದ್ದ ಸ್ಥಳೀಯ ಮೀನುಗಾರರಿಂದ ರಕ್ಷಣಾ ಕಾರ್ಯ ನಡೆಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಕರಾವಳಿ ಕಾವಲು ಪಡೆ ತಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೀನುಗಾರರ ರಕ್ಷಣೆಗೆ ಕರಾವಳಿ ಕಾವಲು ಪಡೆಯು ಕೂಡ ಸಾಥ್ ನೀಡಿದೆ.(ಎಸ್.ಎಂ)