ಕರ್ನಾಟಕಪ್ರಮುಖ ಸುದ್ದಿ

ಸಿದ್ದರಾಮಯ್ಯ ಗೋಮಾಂಸ ತಿನ್ನೋದಾದ್ರೆ ತಿನ್ನಲಿ. ಆದರೆ ವಕೀಲಿಕೆ ಮಾಡೋದು ಬೇಡ ; ಬಿಜೆಪಿ ವಕ್ತಾರ ಛಲವಾದಿ ನಾರಾಯಣಸ್ವಾಮಿ ಆಕ್ರೋಶ

ರಾಜ್ಯ(ಬೆಂಗಳೂರು),ಮೇ.23 : ಸಿದ್ದರಾಮಯ್ಯ ಗೋಮಾಂಸ ತಿನ್ನೋದಾದ್ರೆ ತಿನ್ನಲಿ. ಆದರೆ ವಕೀಲಿಕೆ ಮಾಡೋದು ಬೇಡ ಎಂದು ಬಿಜೆಪಿ ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ತುಮಕೂರಿನಲ್ಲಿ ಗೋಮಾಂಸ ಸೇವನೆ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರ ಸಂಬಂಧ, ಇಂದು ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿ, ವಿಪಕ್ಷ ನಾಯಕ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರು ನಿನ್ನೆ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ. ದಲಿತರು, ಹಿಂದುಳಿದವರು, ಹಿಂದೂಗಳು, ಕ್ರೈಸ್ತರು ಗೋಮಾಸ ತಿಂತಾರೆ ಅಂದಿದ್ದಾರೆ. ಹಾಗಾಗಿ ಗೋ ಮಾಂಸ ನಿಷೇಧ ಮಾಡಬಾರದು ಅಂದಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ಅವರು ಗೋಮಾಂಸ ತಿನ್ನೋದಾದ್ರೆ ತಿನ್ನಲಿ. ವಕೀಲಿಕೆ ಮಾಡೋದು ಬೇಡ. ಸರ್ಕಾರ ನಿರ್ಧಾರ ತೆಗೆದುಕೊಂಡಾಗ ಅದಕ್ಕೆ ಬೆಂಬಲ ನೀಡಬೇಕು. ಆದರೆ ಅದನ್ನ ವಿರೋಧಿಸೋದು ಬೇಡ. ಅವರು ದೇವಸ್ಥಾನಕ್ಕೆ ಹೋಗುವಾಗ ಮಾಂಸ ತಿಂದು ಹೋದ್ರು. ಅದನ್ನೂ ಸಮರ್ಥನೆ ಮಾಡಿಕೊಂಡರು ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಿದ್ದರಾಮಯ್ಯಗೆ ಬಜೆಪಿ, ಆರ್‍ಎಸ್‍ಎಸ್ ಬಗ್ಗೆ ಮಾತನಾಡೋ ಚಟ. ಅವರು ಬೇರೆ ಬೇರೆ ಸಂದರ್ಭದಲ್ಲಿ ಮಾತನಾಡುವಾಗ ದಲಿತರನ್ನ ಹಿಂದುಳಿದವರನ್ನ ಎತ್ತಿ ಕಟ್ಟಿ ಮಾತಾಡೋ ಚಟ. ದೇಶ ದೊಡ್ಡದು, ದೇಶ ಕಟ್ಟೋ ಕೆಲಸ ಮಾಡಬೇಕು. ವಿಷ ಬೀಜ ಬಿತ್ತೋ ಕೆಲಸ ಮಾಡಬಾರದು ಎಂದು ನಾರಾಯಣಸ್ವಾಮಿ ಸಿದ್ದರಾಮಯ್ಯನವರ ವಿರುದ್ಧ ಗರಂ ಆಗಿದ್ದಾರೆ.(ಎಸ್.ಎಂ)

Leave a Reply

comments

Related Articles

error: