ಕರ್ನಾಟಕಪ್ರಮುಖ ಸುದ್ದಿ

ಪಠ್ಯ ಪುಸ್ತಕದಲ್ಲಿ ರಾಷ್ಟ್ರ ಕವಿ ಕುವೆಂಪು ಅವರಿಗೆ ಅಪಮಾನ : ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ

ರಾಜ್ಯ(ಬೆಂಗಳೂರು),ಮೇ.23 : ಪಠ್ಯ ಪುಸ್ತಕದಲ್ಲಿ ರಾಷ್ಟ್ರ ಕವಿ ಕುವೆಂಪು ಅವರಿಗೆ ಅಪಮಾನ ಮಾಡಲಾಗಿದೆ, ಕುವೆಂಪು ಅವರ ಪರಿಚಯದ ವೇಳೆ ಅವಮಾನ ಮಾಡಲಾಗಿದೆ ಎಂಬ ವಿವಾದದ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ ನೀಡಿದ್ದಾರೆ.

ಶಿಕ್ಷಣ ಇಲಾಖೆ ಕಚೇರಿಯಲ್ಲಿಂದು ನಡೆದ ಸುದ್ದಿಗೋಷ್ಠಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಕಳೆದ ವರ್ಷ ಅನೇಕರು ಶಾಲೆ ಪ್ರಾರಂಭ ಆಗಲ್ಲ ಅಂತಿದ್ದರು, ಮಕ್ಕಳನ್ನು ರಿಸ್ಕ್ ಗೆ ತಳ್ತಿದ್ದಾರೆ, ಬಡ ಮಕ್ಕಳ ಜೀವದ ಜೊತೆ ಆಡ್ತಿದ್ದಾರೆ ಅಂದ್ರು. ನಾವು ಎಲ್ಲಾ ರಿಸ್ಕ್ ತೆಗೆದುಕೊಂಡು ಸಕ್ಸಸ್ ಆದೆವು, ಹಿಜಾಬ್ ವಿಚಾರವನ್ನು ನಾವು ಚೆನ್ನಾಗಿ ನಿಭಾಯಿಸಿ ಸಕ್ಸಸ್ ಆದೆವು. ಇವೆಲ್ಲವನ್ನು ಕೆಲವರಿಗೆ ಸಹಿಸಿಕೊಳ್ಳಲು ಅಗುತ್ತಿಲ್ಲ. ಅತಿಥಿ ಶಿಕ್ಷಕರ ನೇಮಕಾತಿಯನ್ನ ಕೆಲವರಿಗೆ ಸಹಿಸಿಕೊಳ್ಳಲು ಅಗುತ್ತಿಲ್ಲ. ಕಲಿಕಾ ಚೇತರಿಕೆ ಎಂಬ ಕಾರ್ಯಕ್ರಮ ತಂದ್ವಿ, ಅದರ ವಿರುದ್ಧವೂ ಮಾತನಾಡಿದ್ರು, ಎಲ್ಲವನ್ನು ಮೆಟ್ಟಿನಿಂತು ಅದರಲ್ಲೂ ಸಕ್ಸಸ್ ಆದೆವು. ಈ ವರ್ಷ ಎಸ್.ಎಸ್.ಎಲ್.ಸಿ ಎಕ್ಸಾಂ ರಿಸಲ್ಟ್ ಸುಸೂತ್ರವಾಗಿ ಬಂತು, ಅದನ್ನು ಕೆಲವರಿಗೆ ಸಹಿಸಲಾಗ್ತಿಲ್ಲ ಎಂದು ವಿಪಕ್ಷದ ವಿರುದ್ಧ ಕಿಡಿ ಕಾರಿದ್ದಾರೆ.

ಕುವೆಂಪು ಗೆ ಅವಮಾನ ಮಾಡಿದವರ್ಯಾರು, ಕುವೆಂಪು ಪಠ್ಯ ತೆಗೆದವರ್ಯಾರು? ಕುವೆಂಪು ಅವರ ರಾಮಾಯಣ ದರ್ಶನಂ ಪಠ್ಯ ತೆಗೆದವರ್ಯಾರು? ಗೂಗಲ್ ನಲ್ಲೇ ಮಾಹಿತಿ ಇದೆ ಟಿಪ್ಪು ಸುಲ್ತಾನ್ ಮತಾಂತರ ಮಾಡ್ತಿದ್ದ ಅಂತಿದೆ, ವಿಕಿಪೀಡಿಯ ದಲ್ಲಿ ನೋಡಿ. ಅದನ್ಯಾಕೆ ಪಠ್ಯದಲ್ಲಿ ತೆಗೆದಿದ್ದಾರೆ, ಟಿಪ್ಪು ಒಬ್ಬ ಮತಾಂದ ಅನ್ನೋದನ್ಯಾಕೆ ತೆಗೆದ್ರಿ?  ಹಿಂದೂ ಎಂಬ ಪದ ಎಲ್ಲೆಲ್ಲಿ ಇದ್ಯೋ ಅದನ್ನೇಲ್ಲಾ ತೆಗೆಯುವಂತ ಕೆಲಸ ನಡೆದಿದೆ. ಎಷ್ಟರ ಮಟ್ಟಿಗೆ ಅಂದ್ರೆ ಹಿಂದೂ ಮಹಾಸಾಗರ ಅನ್ನೋ ಪದವೇ ಇವರಿಗೆ ಆಗಲ್ಲ. ಇವರದ್ದು ಹಿಂದೂ ವಿರೋಧಿ ಸಿದ್ಧಾಂತ, ಮುಸ್ಲಿಂ ತುಷ್ಟೀಕರಣ ಎಂದು ಈ ಹಿಂದೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.(ಎಸ್.ಎಂ)

Leave a Reply

comments

Related Articles

error: