ಕರ್ನಾಟಕಪ್ರಮುಖ ಸುದ್ದಿ

ಪಾಲಿಕೆ ಕೌನ್ಸಿಲ್ ಕಟ್ಟಡಕ್ಕೆ ಹೈಟೆಕ್ ಟಚ್ : ಹತ್ತು ಕೋಟಿ ವೆಚ್ಚದಲ್ಲಿ ಕಟ್ಟಡ ಮರು ವಿನ್ಯಾಸ

ರಾಜ್ಯ(ಬೆಂಗಳೂರು),ಮೇ.25 : ಬಿಬಿಎಂಪಿ ಚುನಾವಣೆಗೆ ಸುಪ್ರಿಂ ಕೋರ್ಟ್ ಗ್ರೀನ್ ಸಿಗ್ನಲ್ ಹಿನ್ನಲೆ, ಪಾಲಿಕೆ ಕೇಂದ್ರ ಕಚೇರಿಯಲ್ಲಿ ವಾತಾವರಣ ಗರಿಗೆದರಿದೆ. ಪಾಲಿಕೆ ನೂತನ ಸದಸ್ಯರಿಗೆ ಹೊಸ ಕೌನ್ಸಿಲ್ ಹೌಸ್ ನಿರ್ಮಾಣವಾಗಲಿದೆ.

ಬಿಬಿಎಂಪಿ ಕೆಂಪೇಗೌಡ ಪೌರ ಸಭಾಂಗಣಕ್ಕೆ ಹೈಟೆಕ್ ಟಚ್ ಕೊಡಲಿದ್ದು,  ಬಿಬಿಎಂಪಿಯ ಕೌನ್ಸಿಲ್ ಕಟ್ಟಡ ನವೀಕರಣಕ್ಕೆ ಪಾಲಿಕೆ ಅಡಳಿತಾಧಿಕಾರಿಯಿಂದ ಗ್ರೀನ್ ಸಿಗ್ನಲ್ ನೀಡಿದ್ದಾರೆ. ವಾರ್ಡ್ ವಿಂಗಡಣೆಯಂತೆ ಈ ಬಾರಿ ಬಿಬಿಎಂಪಿ ಚುನಾವಣೆ ನಡೆಯುತ್ತಿದ್ದು, ಪಾಲಿಕೆ ಅಧಿಕಾರಿಗಳು ಕೌನ್ಸಿಲ್ ಕಟ್ಟಡವನ್ನೂ ವಿನ್ಯಾಸ ಗೋಳಿಸಲಾಗುತ್ತಿದೆ.  ಕಳೆದ ಬಾರಿ 198 ವಾರ್ಡ್ ಇದ್ದ ಬಿಬಿಎಂಪಿ ,ಈ ಬಾರಿ 243 ವಾರ್ಡ್ ಆಗಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಕೌನ್ಸಿಲ್ ಕಟ್ಟಡವನ್ನ ಮರು ವಿನ್ಯಾಸದ ಜೊತೆಗೆ ಹೈಟೆಕ್ ತಂತ್ರಜ್ಞಾನ ಅಳವಡಿಕೆಗೆ ಸಿದ್ದತೆ ನಡೆಸಲಾಗುತ್ತಿದೆ.

ಪಾಲಿಕೆ ಕೌನ್ಸಿಲ್ ಕಟ್ಟಡಕ್ಕೆ ಹೊಸ ಬ್ಲೂ ಪ್ರಿಂಟ್ ಸಿದ್ದ ಪಡಿಸಿದ್ದು, 10 ಕೋಟಿ ವೆಚ್ಚದಲ್ಲಿ ಪಾಲಿಕೆ ಕೌನ್ಸಿಲ್ ಕಟ್ಟಡ ಮರು ವಿನ್ಯಾಸ ಮಾಡಲಾಗುತ್ತಿದೆ. ಇದುವರೆಗೂ 270 ಮಂದಿ ಕೂರಲು ಅವಕಾಶವಿದ್ದ ಕೌನ್ಸಿಲ್ ಸಭಾಂಗಣ, ಪಾಲಿಕೆ ಸದಸ್ಯರು,ನಾಮ ನಿರ್ದೇಶಿತ ಸದಸ್ಯರು, ಶಾಸಕರು, ಸಂಸದರು ಪರಿಷತ್ ಸದಸ್ಯರಿಗೆ  270 ಸ್ಥಾನ ಸೀಮಿತವಾಗಿತ್ತು.  ಈಗ  ಪಾಲಿಕೆ ಕೌನ್ಸಿಲ್ 364 ಮಂದಿಗೆ ಕುರ್ಚಿ ಗಳ ಸಂಖ್ಯೆ ಏರಿಸಿದೆ. ಪ್ರತಿ ಸದಸ್ಯರ ಆಸನದಲ್ಲಿ ಮೈಕ್ ಅಳವಡಿಕೆ ಮಾಡಲಾಗುತ್ತಿದ್ದು,   ಸೌಂಡ್ ಪ್ರೂಪ್ ಸಭಾಂಗಣ ಅಳವಡಿಕೆಯಾಗಲಿದೆ. ಕೌನ್ಸಿಲ್ ಹೌಸ್ ನಲ್ಲಿ ಸಿಸಿ ಕ್ಯಾಮಾರ ಅಳವಡಿಕೆ ಜೊತೆಗೆ  ಸಾರ್ವಜನಿಕರಿಗೆ ಹಾಗೂ ಮಾದ್ಯಮದವರಿಗೆ ಪ್ರತ್ಯೇಕ ಅಸನದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.(ಎಸ್.ಎಂ)

Leave a Reply

comments

Related Articles

error: