ಕರ್ನಾಟಕಪ್ರಮುಖ ಸುದ್ದಿಮನರಂಜನೆ

ಕ್ಯಾನ್ಸರ್ ರೋಗಿಗಳಿಗೆ ತನ್ನ ಕೂದಲನ್ನು ದಾನ ಮಾಡಿದ ಬಾಲ ಪ್ರತಿಭೆ ಇಬ್ಬನಿ

ರಾಜ್ಯ(ಬೆಂಗಳೂರು),ಮೇ.25 : ‘ನನ್ನಮ್ಮ ಸೂಪರ್ ಸ್ಟಾರ್’ ಖ್ಯಾತಿಯ ಇಬ್ಬನಿ ತಾನು ಪ್ರೀತಿಯಿಂದ ಬೆಳೆಸಿದ ಕೂದಲನ್ನು ದಾನ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಏಳು ವರ್ಷದ ಈ ಪುಟ್ಟ ಪೋರಿಯ ಒಳ್ಳೆಯ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಇಬ್ಬನಿ ಸ್ಯಾಂಡಲ್‌ವುಡ್‌ನ ಖ್ಯಾತ ನಟರಾದ ಪ್ರಮೋದ್ ಶೆಟ್ಟಿ ಮತ್ತು ಸುಪ್ರಿತಾ ಶೆಟ್ಟಿ ದಂಪತಿಯ ಮಗಳು. ಇಬ್ಬನಿ ಪ್ರೀತಿಯಿಂದ ಉದ್ದವಾದ ಕೂದಲು ಬೆಳೆಸಿದ್ದರು. ಅದೆ ಪ್ರೀತಿಯ ಕೂದಲನ್ನು ಈಗ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗಾಗಿ ದಾನ ಮಾಡಿದ್ದಾರೆ.

ಅಂದಹಾಗೆ ಇಬ್ಬನಿ ಕೂದಲು ದಾನಕ್ಕೆ ಸ್ಫೂರ್ತಿಯಾಗಿದ್ದು ನಿರೂಪಕಿ ಅನುಪಮಾ ಗೌಡ. ಹೌದು, ಈ ಮೊದಲು ಅನುಪಮಾ ಗೌಡ ಕೂಡ ಪ್ರೀತಿಯಿಂದ ಬೆಳೆಸಿದ್ದ ಉದ್ದವಾದ ಕೂದಲನ್ನು ಕ್ಯಾನ್ಸರ್ ರೋಗಿಗಳಿಗಾಗಿ ದಾನ ಮಾಡಿದ್ದರು. ಇದೀಗ ಇಬ್ಬನಿ ಕೂಡ ಅದೇ ನಿರ್ಧಾರ ತೆಗೆದುಕೊಂಡಿದ್ದಾರೆ. ಅಲ್ಲದೇ ತನ್ನ ಕೂದಲು ದಾನಕ್ಕೆ ಅನುಪಮ ಗೌಡ ಅವರೇ ಪ್ರೇರಣೆ ಎಂದು ಹೇಳಿದ್ದಾರೆ.

ಈ ಬಗ್ಗೆ ಇಬ್ಬನಿ ತಾಯಿ, ನಟಿ ಸುಪ್ರಿತಾ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ಕ್ಯಾನ್ಸರ್ ರೋಗಿಗಳಿಗೆ ವಿಗ್ ಮಾಡಲು ತನ್ನ ಕೂದಲನ್ನು ಇಬ್ಬನಿ ದಾನ ಮಾಡಿದ್ದಾಳೆ. ಇಬ್ಬನಿಗೆ ಅನುಪಮಾ ಗೌಡ ಸ್ಫೂರ್ತಿ’ ಎಂದು ಹೇಳಿದ್ದಾರೆ.(ಎಸ್.ಎಂ)

Leave a Reply

comments

Related Articles

error: