ಕರ್ನಾಟಕಪ್ರಮುಖ ಸುದ್ದಿಮೈಸೂರು

ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿದರೆ ನೂರಕ್ಕೆ ನೂರು ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು : ಮಾಜಿ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ಅಭ್ಯರ್ಥಿ ಮಧು.ಜಿ.ಮಾದೇಗೌಡ ನಾಮಪತ್ರ ಸಲ್ಲಿಕೆ

ಮೈಸೂರು,ಮೇ.25:-  ಕಾಂಗ್ರೆಸ್ ಕಾರ್ಯಕರ್ತರು ಒಗ್ಗಟ್ಟಾಗಿ ಸವಾಲಾಗಿ ಸ್ವೀಕರಿಸಿ ಕೆಲಸ ಮಾಡಿದರೆ  ಪಕ್ಷದ ಅಭ್ಯರ್ಥಿ ಮಧು.ಜಿ.ಮಾದೇಗೌಡ ಗೆಲುವು ನೂರಕ್ಕೆ ನೂರು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಮಧ್ಯಾಹ್ನ ಒಂದು ಗಂಟೆಗೆ ದಕ್ಷಿಣ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ ಗೆ ಜೂ.13ರಂದು ನಡೆಯುವ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಧು.ಜಿ.ಮಾದೇಗೌಡ ಅವರು ಪ್ರಾದೇಶಿಕ ಆಯುಕ್ತರ ಕಛೇರಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದು, ಅದಕ್ಕೂ ಮುನ್ನ ಪಕ್ಷದ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡ ಸಿದ್ದರಾಮಯ್ಯ ಮಾತನಾಡಿದರು.

ಬೆಲೆ ಏರಿಕೆ ಇಂದು ಎಷ್ಟರಮಟ್ಟಿಗೆ ಜನರನ್ನು ಸಂಕಷ್ಟಕ್ಕೆ ದೂಡಿದೆ.  ಬಿಜೆಪಿಯವರು ಏನೋ ಕಡಿದು ಕಟ್ಟೆ ಹಾಕಿದ್ದೇವೆಂದು ಓಡಾಡುತ್ತಿದ್ದಾರೆ. ಕಾರ್ಯಕರ್ತರು ಮತದಾರರನ್ನು ವೈಯುಕ್ತಿಕವಾಗಿ ಭೇಟಿ ಮಾಡಬೇಕು. ಮೈಸೂರಲ್ಲಿ 54ಸಾವಿರ, ಮಂಡ್ಯದಲ್ಲಿ 44ಸಾವಿರ ಚಾಮರಾಜನಗರ, ಹಾಸನ ಸೇರಿದಂತೆ ಒಟ್ಟು ಒಂದು ಲಕ್ಷದ ಮೂವತ್ತ್ಮೂರು ಸಾವಿರ ಮತಗಳು ಕಾಂಗ್ರೆಸ್ ಸಿಗುವಂತಾಗಬೇಕು.  ಬಿಜೆಪಿಯ ಭ್ರಷ್ಟಾಚಾರ, ನಿಷ್ಕ್ರೀಯತೆ, ಅಭಿವೃದ್ಧಿ  ವಿರೋಧಿ, ಬೆಲೆ ಏರಿಕೆ ಎಲ್ಲವನ್ನೂ ಮತದಾರರಿಗೆ ತಿಳಿಸಬೇಕು. ಬಿಜೆಪಿ  ದೇಶದಲ್ಲಿ ಸಾಮರಸ್ಯವನ್ನು ಹಾಳು ಮಾಡಿದೆ. ದೇಶದಲ್ಲಿ ಸಾಮರಸ್ಯವಿರಬೇಕು. ಕಾನೂನು ಸುವ್ಯವಸ್ಥೆ ಇಲ್ಲದಿದ್ದರೆ, ಶಾಂತಿ ಸುವ್ಯವಸ್ಥೆ ಇಲ್ಲದಿದ್ದರೆ ದೇಶದ ಅಭಿವೃದ್ಧಿಯಾಗಲ್ಲ.  ಭಾರತ ದೇಶದಲ್ಲಿ ಶ್ರೀಲಂಕಾ ಪರಿಸ್ಥಿತಿ ನಿರ್ಮಾಣವಾಗಲು ಬಿಡಬಾರದು ಎಂದರು.

ಜೆಡಿಎಸ್ ಬಗ್ಗೆ ನಾನು ಮಾತಾಡಲ್ಲ. ನಮ್ಮ   ಕಾರ್ಯಕರ್ತರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಬೇಕು. ಮಧು ಅವರು ಗೆಲ್ಲುವ ಸಾಧ್ಯತೆ ನೂರಕ್ಕೆ ನೂರು ಇದೆ. ಕಾರ್ಯಕರ್ತರು ಒಗ್ಗಟ್ಟಾಗಿ ಸವಾಲಾಗಿ ಕೆಲಸ ಮಾಡಿದರೆ ಗೆಲುವು ಸಾಧ್ಯ ಎಂದು ತಿಳಿಸಿದರು.

ಬಳಿಕ ಕಾಂಗ್ರೆಸ್ ಭವನದಿಂದ ಪ್ರಾದೇಶಿಕ ಆಯುಕ್ತರ ಕಛೇರಿಯವರೆಗೆ ಕಾಂಗ್ರೆಸ್ ಅಭ್ಯರ್ಥಿ ಮಧು.ಜಿ.ಮಾದೇಗೌಡ ಅವರು ನೂರಾರು ಕಾರ್ಯಕರ್ತರು, ಮುಖಂಡರೊಂದಿಗೆ  ಮೆರವಣಿಗೆಯಲ್ಲಿ ತೆರಳಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್, ಮಾಜಿ ಸಿಎಂ ಸಿದ್ದರಾಮಯ್ಯ ಒಟ್ಟಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: