ಕರ್ನಾಟಕಪ್ರಮುಖ ಸುದ್ದಿ

ಮಳಲಿ ದರ್ಗಾದ ಸುತ್ತಮುತ್ತ 500 ಮೀಟರ್ ನಿರ್ಬಂಧ ; ಕಮಿಷನರ್ ಶಶಿಕುಮಾರ್

ರಾಜ್ಯ(ಮಂಗಳೂರು),ಮೇ.25 : ಮಂಗಳೂರಿನ ಮಳಲಿ ದರ್ಗಾ ಪ್ರದೇಶಕ್ಕೆ​ ಪೊಲೀಸ್ ಕಮಿಷನರ್​​ ಶಶಿಕುಮಾರ್​​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಳಲಿ ದರ್ಗಾದ ಸಮೀಪ ಶ್ರೀರಾಮ ಭಜನಾ ಮಂದಿರದಲ್ಲಿ  ತಾಂಬೂಲ ಪ್ರಶ್ನೆ ನಡೆದಿದ್ದು, ತಾಂಬೂಲ ಪ್ರಶ್ನೆ ಪ್ರಕ್ರಿಯೆ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್​​​​ ನೀಡಿದ್ದು, ದರ್ಗಾ ಬಳಿಗೆ ಯಾರೂ ಭೇಟಿ ನೀಡದಂತೆ ಭದ್ರತೆ ನೀಡಲಾಗಿದೆ. ದರ್ಗಾದ 500 ಮೀಟರ್​​​ ದೂರದವರೆಗೂ ನಿರ್ಬಂಧ ಹೇರಲಾಗಿದೆ.

ನಾಳೆ ಬೆಳಗ್ಗೆ 8 ಗಂಟೆವರೆಗೂ ದರ್ಗಾ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಮಿಷನರ್​​ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಮಾಧ್ಯಮದೊಂದಿಗೆ​​​ ಮಾತನಾಡಿ, ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರದಂತೆ ಮನವಿ ಮಾಡಿಕೊಂಡಿದ್ದಾರೆ. ಈಗಾಗಲೇ ಪ್ರಕರಣ ಕೋರ್ಟ್​ನಲ್ಲಿದೆ.. ಹೀಗಾಗಿ ಅಲ್ಲೇ ಇತ್ಯರ್ಥ ಮಾಡಿಕೊಳ್ಳುತ್ತಾರೆ. ಸ್ಥಳೀಯ ಮುಖಂಡರು ಶಾಂತಿ ಕಾಪಾಡುವ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.(ಎಸ್.ಎಂ)

Leave a Reply

comments

Related Articles

error: