ಮೈಸೂರು

ಸಪ್ತಪದಿ ತುಳಿದ 61 ಜೋಡಿ: ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸರಳ ಮದುವೆಯಾಗಲು ಇಓ ರವೀಂದ್ರ ಕರೆ

ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಸಾಮೂಹಿಕ ವಿವಾಹ

ಮೈಸೂರು, ಮೇ.25:- ದಕ್ಷಿಣ ಕಾಶಿ ನಂಜನಗೂಡು ಪುಣ್ಯಕ್ಷೇತ್ರ ದ  ಶ್ರೀ ಶ್ರೀಕಂಠೇಶ್ವರ ದೇವಾಲಯದಲ್ಲಿ 61 ಜೋಡಿಗಳು ಇಂದು ಸಾಮೂಹಿಕ ವಿವಾಹದಲ್ಲಿ ಸಪ್ತಪದಿ ತುಳಿದರು.

ಶ್ರೀಕಂಠೇಶ್ವರಸ್ವಾಮಿ ನಂಜನಗೂಡು, ಶ್ರೀ ಚಾಮುಂಡೇಶ್ವರಿ ತಾಯಿ  ಸನ್ನಿಧಾನ ಮೈಸೂರು, ವೈದ್ಯನಾಥೇಶ್ವರ ಸ್ವಾಮಿ ತಲಕಾಡು ಇವರ ಸಂಯುಕ್ತಾಶ್ರಯದಲ್ಲಿ 61 ಜೋಡಿ ಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕಟಕ ಲಗ್ನ 10:55 ರಿಂದ 11:40 ಶುಭಲಗ್ನದಲ್ಲಿ ನವಜೋಡಿಗಳು ಸತಿಪತಿಗಳಾದರು ಈ ಕಾರ್ಯಕ್ರಮ ಶ್ರೀ ಶ್ರೀಕಂಠೇಶ್ವರ ಕಲಾಮಂದಿರದಲ್ಲಿ ನೆರವೇರಿತು.
ನವಜೋಡಿಗಳಿಗೆ 8 ಗ್ರಾಂ ಚಿನ್ನದ ತಾಳಿ, ಚಿನ್ನದ ಗುಂಡುಗಳು ಮತ್ತು ಸೀರೆ, ರವಕೆ ,ಪಂಚೆ ಶರ್ಟು ಸೇರಿದಂತೆ ವಧುವಿಗೆ 10 ಸಾವಿರ, ವರನಿಗೆ 5 ಸಾವಿರ ನೀಡಲಾಗಿದೆ.

ಮದುವೆಗೆ ಅವರ ಕುಟುಂಬದವರಿಗೆ ಮತ್ತು ಅವರ ಸ್ನೇಹಿತರಿಗೆ ಎಲ್ಲರಿಗೂ 8 ಸಾವಿರ ಜನರಿಗೆ ಲಾಡು, ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮೈಸೂರಿನ ಜಿಲ್ಲಾಧಿಕಾರಿ  ಡಾ.ಬಗಾದಿ ಗೌತಮ್  ವಧುವರರಿಗೆ ತಾಳಿ ವಿತರಣೆ ಮಾಡಿ ಆಶೀರ್ವದಿಸಿದರು. ಆಗಮಿಕರಾದ ನಾಗಚಂದ್ರ ದೀಕ್ಷಿತ್, ಶ್ರೀಕಂಠ ಜೋಯಿಸ್, ಶಂಕರ್ ದೀಕ್ಷಿತ್ ಮಂತ್ರ ಘೋಷಣೆ ಹೇಳುತ್ತ ನವಜೋಡಿಗಳಿಗೆ ನಿಗದಿಪಡಿಸಿದ ಲಗ್ನದಲ್ಲಿ  ವಿವಾಹ ನೆರವೇರಿಸಿದರು.
ಶ್ರೀ ಶ್ರೀಕಂಠೇಶ್ವರ ದೇವಾಲಯದ ಇ ಓ ರವೀಂದ್ರ ಮಾತನಾಡಿ ಇಂದಿನ ಕಾರ್ಯಕ್ರಮ ಯಶಸ್ವಿಯಾಗಿದೆ. ಉತ್ತಮ ಕಾರ್ಯಕ್ರಮವಾಗಿದೆ. ಯಾವುದೇ ರೀತಿಯ ತೊಂದರೆ ಇಲ್ಲದೆ ಎಲ್ಲರ ಸಹಕಾರದಿಂದ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ಮುಂದಿನ ದಿನಗಳಲ್ಲಿ ದುಂದುವೆಚ್ಚ ಮಾಡಿಕೊಂಡು ಅದ್ದೂರಿ ಮದುವೆ ಕೈಬಿಟ್ಟು ಸರಳ ಮದುವೆ ಮಾಡಿ ಕೊಂಡರೆ ಉತ್ತಮ ಎಂದರು.
ಕಾರ್ಯಕ್ರಮದಲ್ಲಿ  ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಇ ಓ ಯತಿರಾಜ್,ತಹಶೀಲ್ದಾರ್ ಶಿವಮೂರ್ತಿ,  ಶ್ರೀಕಂಠೇಶ್ವರ ದೇವಾಲಯದ  ಎಇ ಓ ವೆಂಕಟೇಶ್ ಪ್ರಸಾದ್ ,ನಗರಸಭೆ ಆಯುಕ್ತ ರಾಜಣ್ಣ,  ಗುರು ಮಲ್ಲಯ್ಯ ಮತ್ತು ಉಪನಿರೀಕ್ಷಕ ಲಕ್ಷ್ಮಿಕಾಂತ ತಳವಾರ್, ಪಿಎಸ್ಐ ವಿಜಯರಾಜ್ ಸೇರಿದಂತೆ ವಧು-ವರರ ಕುಟುಂಬಸ್ಥರು ಎಲ್ಲ ಅಧಿಕಾರಿಗಳು ಸೇರಿದಂತೆ ಇತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: