
ಮೈಸೂರು,ಮೇ.25 :- ಪ್ರತಿ ವರ್ಷದಂತೆ ಈ ವರ್ಷವೂ ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಮಾವು ಮೇಳ ನಡೆಯಲಿದ್ದು. ಮೇ.27ಕ್ಕೆ ಚಾಲನೆ ಸಿಗಲಿದ್ದು, ಮೇ.29 ವರೆಗೆ ಮೇಳವು ನಡೆಯಲಿದೆ.
ನಗರದ ಹಾರ್ಡಿಂಜ್ ಸರ್ಕಲ್ ಹತ್ತಿರವಿರುವ ಕುಪ್ಪಣ್ಣ ಪಾರ್ಕ್ ನಲ್ಲಿ ನಡೆಯಲಿದೆ. ಮಾವು ಮಳಿಗೆಗಳನ್ನು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಉದ್ಘಾಟನೆ ಮಾಡಲಿದ್ದು, ಮಾವು ತಳಿಗಳ ಪ್ರದರ್ಶನವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪೂರ್ಣಿಮಾ ಬಿ.ಆರ್ ಅವರು ಉದ್ಘಾಟನೆ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೋಟಗಾರಿಕೆ ಜಂಟಿ ನಿರ್ದೇಶಕ ನಾಗರಾಜು ಹೆಚ್.ಎಂ ವಹಿಸಲಿದ್ದು, ಲಾಲ್ ಬಾಗ್ ತೋಟಗಾರಿಕೆ ಅಪರ ನಿರ್ದೇಶಕ ಡಾ.ಪ್ರಕಾಶ್ ಎಂ.ಸೊಬರದ್, ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತ ಇದರ ವ್ಯವಸ್ಥಾಪಕ ನಿರ್ದೇಶಕ ಡಾ.ಜೆ.ವಿ.ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ. (ಜಿ.ಕೆ, ಎಸ್.ಎಂ)