ಕರ್ನಾಟಕಪ್ರಮುಖ ಸುದ್ದಿ
ಮದ್ಯ ಮಾರಾಟ ನಿಷೇಧ
ರಾಜ್ಯ(ಮಡಿಕೇರಿ) ಮೇ.26:-ಕೊಡಗು ಜಿಲ್ಲಾ ಪೊನ್ನಂಪೇಟೆ ತಾಲ್ಲೂಕು ಗೋಣಿಕೊಪ್ಪ ಪೊಲೀಸ್ ಠಾಣಾ ಸರಹದ್ದಿನ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪಿಗೆ ಸೇರುವ ದೇವರಪುರ ಗ್ರಾಮದಲ್ಲಿ ಮೇ, 26 ರಂದು ಶ್ರೀ ಅಯ್ಯಪ್ಪ ಮತ್ತು ಭದ್ರಕಾಳಿ ದೇವರ ಬೇಡು(ಕುಂಡೆ)ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಅಬಕಾರಿ ಕಾಯ್ದೆ 1965ರ ಕಲಂ 21 ರಲ್ಲಿ ದತ್ತವಾದ ಅಧಿಕಾರದಂತೆ ಮೇ, 25 ರ ಮಧ್ಯ ರಾತ್ರಿಯಿಂದ ಮೇ, 26 ರ ಮಧ್ಯರಾತ್ರಿಯವರೆಗೆ ಗೋಣಿಕೊಪ್ಪ ದೇವರಪುರ ಮತ್ತು ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯ ಬಾಳೆಲೆ, ಪೊನ್ನಂಪೇಟೆ, ತಿತಿಮತಿ ಮತ್ತು ಪಾಲಿಬೆಟ್ಟ ಗ್ರಾಮಗಳಲ್ಲಿರುವ ಎಲ್ಲಾ ರೀತಿಯ ಮದ್ಯದ ಅಂಗಡಿ, ಬಾರ್, ಹೋಟೆಲ್ ಮತ್ತು ಕ್ಲಬ್ಗಳಲ್ಲಿ ಎಲ್ಲಾ ವಿಧದ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಆದೇಶ ಹೊರಡಿಸಿದ್ದಾರೆ. (ಜಿ.ಕೆ,ಎಸ್.ಎಚ್)