
ಮೈಸೂರು
ವ್ಯಂಗ್ಯ ಚಿತ್ರಕಾರ ನಾಗೇಂದ್ರ ಬಾಬುಗೆ ಮಾತೃವಿಯೋಗ
ಮೈಸೂರು,ಮೇ.25:- ವ್ಯಂಗ್ಯಚಿತ್ರಕಾರ ಫುಲ್ ಬ್ರೈಟರ್ ಎಂ.ವಿ. ನಾಗೇಂದ್ರ ಬಾಬು ಅವರ ತಾಯಿ ಎಂ.ಎನ್. ವಿಜಯಕುಮಾರಿ (74) ಬುಧವಾರ ಮಧ್ಯಾಹ್ನ ಜೆಎಸ್ಎಸ್ ಆಸ್ಪತ್ರೆಯಲ್ಲಿ ನಿಧನರಾದರು.
ವಿದ್ಯಾರಣ್ಯಪುರಂ ನಿವಾಸಿ, ಲೇಟ್ ಎಸ್.ಎನ್. ವಾಸುದೇವರಾವ್ ಅವರ ಧರ್ಮಪತ್ನಿಯಾದ ಇವರಿಗೆ ಪುತ್ರರಾದ ಎಂ.ವಿ.ನಾಗೇಂದ್ರ ಬಾಬು, ಎಂ.ವಿ. ಗುರುದತ್ ಹಾಗೂ ಪುತ್ರಿ ಎಂ.ವಿ.ಅನಿತಾ ಇದ್ದಾರೆ. ಅಂತ್ಯಕ್ರಿಯೆ ನಾಳೆ(ಗುರುವಾರ) ಬೆಳಗ್ಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. (ಕೆ.ಎಸ್,ಎಸ್.ಎಚ್)