
ಮೈಸೂರು
ಮೈಸೂರಿಗೆ ಗೋವಾ ಮುಖ್ಯಮಂತ್ರಿ ಭೇಟಿ
ಮೈಸೂರು, ಮೇ.25:- ಮೈಸೂರಿನಲ್ಲಿ ಅವಧೂತ ದತ್ತಪೀಠಾಧಿಪತಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ವರ್ಧಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಗೋವಾ ರಾಜ್ಯದ ಮುಖ್ಯಮಂತ್ರಿಗಳಾದ ಪ್ರಮೋದ್ ಸಾವಂತ್ ಅವರನ್ನು ಇಂದು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಬಿಜೆಪಿ ಮುಖಂಡರು ಸ್ವಾಗತಿಸಿದರು.
ಮೈಸೂರು ನಗರ ಬಿಜೆಪಿ ವಕ್ತಾರರಾದ ಕೇಬಲ್ ಮಹೇಶ್ , ಸಚ್ಚಿದಾನಂದ ಆಶ್ರಮದ ಭಕ್ತಾದಿಗಳಾದ ರಮೇಶ್ ,ಕಣ್ಣನ್ ,ವಿಕ್ರಂ ಅಯ್ಯಂಗಾರ್ ,ವಕೀಲರಾದ ವಿವೇಕ್ ,ಉದ್ಯಮಿ ಶಿವು ಮಾದೇಗೌಡ ಅವರು ಹೂಗುಚ್ಛ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು . (ಕೆ.ಎಸ್,ಎಸ್.ಎಚ್)