ಮೈಸೂರು

ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳತನ : ಕಳ್ಳನ ಬಂಧನ

ಮೈಸೂರು, ಮೇ.25:- ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಿನ್ನಾಭರಣ ಕಳ್ಳತನ ಮಾಡಿದ್ದ ವ್ಯಕ್ತಿಯೋರ್ವನನ್ನು ಕೆ.ಆರ್.ನಗರ ಪೊಲೀಸರು ಬಂಧಿಸಿದ್ದಾರೆ.

25.04.2022 ರಂದು ಕೆ.ಆರ್.ನಗರ ಟೌನ್, ಮೀನಾಕ್ಷಿ ಬ್ಲಾಕ್‌ನ ಪುಷ್ಪಲತಾ ಅವರು ಕೆ.ಆರ್.ನಗರ ಪೊಲೀಸ್ ಠಾಣೆಗೆ ಹಾಜರಾಗಿ 23.04.2022 ಮತ್ತು 24.04.2022 ರಂದು ಅವರ ಸಂಬಂಧಿಕರ ಅನಾರೋಗ್ಯದ ನಿಮಿತ್ತ ಮೈಸೂರಿಗೆ ತೆರಳಿದ್ದು, ಆ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲ ಡೋರ್ ಲಾಕ್ ಒಡೆದು ಮನೆಯ ಒಳಗೆ ನುಗ್ಗಿ, ಮನೆಯಲ್ಲಿದ್ದ ಬೀರುವನ್ನು ಮೀಟಿ 30 ಗ್ರಾಂ ಚಿನ್ನ ಹಾಗೂ 50 ಗ್ರಾಂ ಬೆಳ್ಳಿ ಪದಾರ್ಥಗಳನ್ನು ಕಳ್ಳತನ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಕ.ಆರ್‌.ನಗರ ಪೊಲೀಸ್ ಠಾಣಾ ಮೊ.ನಂ. 144/2022 ಕಲಂ 457, 380 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿತ್ತು.

ಪ್ರಕರಣದ ಪತ್ತೆ ಬಗ್ಗೆ ಎಸ್ಪಿ ಚೇತನ್.ಆರ್ ಮೈಸೂರು ಅವರ ಸೂಚನೆಯಂತೆ ಹಾಗೂ ಆರ್.ಶಿವಕುಮಾರ್ ಅಪರ ಪೊಲೀಸ್ ಅಧೀಕ್ಷಕರು ಮೈಸೂರು ಜಿಲ್ಲೆ ಮತ್ತು ಸುಮಿತ್ ಡಿ.ಎಸ್.ಪಿ ಮೈಸೂರು ಗ್ರಾಮಾಂತರ ಉಪವಿಭಾಗ ಅವರ ಮಾರ್ಗದರ್ಶನದಂತೆ, ಲವ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಆರ್.ನಗರ ಪೊಲೀಸ್ ಠಾಣೆ ಅವರ ನೇತೃತ್ವದ ತಂಡವು ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಿ, ಆರೋಪಿಯನ್ನು ಬಂಧಿಸಿ, ಆರೋಪಿಯಿಂದ 30 ಗ್ರಾಂ ಚಿನ್ನಾಭರಣ ಹಾಗೂ 500 ಗ್ರಾಂ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಂಡಿರುತ್ತಾರೆ. ಸದರಿ ಆರೋಪಿಯು ಅರಸೀಕರ ಪೊಲೀಸ್ ಠಾಣೆಯ 7ಪ್ರಕರಣಗಳು, ಭದ್ರಾವತಿ ಠಾಣೆಯ 2 ಪ್ರಕರಣಗಳು, ಚಿಕ್ಕನಾಯಕನಹಳ್ಳಿ ಹಾಗೂ ಕಡೂರು ಪೊಲೀಸ್ ಠಾಣೆಯ ತಲಾ ಒಂದು ಪ್ರಕರಣಗಳಲ್ಲಿ ಆರೋಪಿಯಾಗಿದ್ದು ಮೇಲ್ಕಂಡ 7 ಪ್ರಕರಣದಲ್ಲಿ ವಾರಂಟ್ ಆಸಾಮಿಯಾಗಿರುತ್ತಾನೆ.

ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ಲವ ಪೊಲೀಸ್ ಇನ್ಸ್‌ ಪೆಕ್ಟರ್ ಕೆ.ಆರ್.ನಗರ ಪೊಲೀಸ್ ಠಾಣೆ, ಚಂದ್ರಹಾಸ ನಾಯಕ ಪೊಲೀಸ್ ಉಪನಿರೀಕ್ಷಕರು, ಬಾಲಸುಬ್ರಮಣಿ ಪೊಲೀಸ್ ಉಪನಿರೀಕ್ಷಕರು, ಹಾಗೂ ಸಿಬ್ಬಂದಿಗಳಾದ ಹಿದಾಯತ್ ಉಲ್ಲಾ, ರಾಘವೇಂದ್ರ, ಪುನಿತ್, ರಾಜು,ಅನಿತಕುಮಾರ್, ವಸಂತಕುಮಾರ್‌, ಸುನಿತಾ ಅವರುಗಳ ಕಾರ್ಯವನ್ನು ಎಸ್ಪಿ ಅವರು ಪ್ರಶಂಸಿಸಿ ಬಹುಮಾನ ಘೋಷಿಸಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: