
ಮೈಸೂರು,ಮೇ.26:- ರಂಗವಲ್ಲಿ ಮೈಸೂರು ತಂಡವು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರ ಸಹಯೋಗದೊಂದಿಗೆ ಮೇ 28 ಮತ್ತು 29ರ ಶನಿವಾರ, ಭಾನುವಾರಗಳಂದು ಸಂಜೆ 6.30ಕ್ಕೆ ಮೈಸೂರಿನ ಕಲಾಮಂದಿರದಲ್ಲಿರುವ ಕಿರುರಂಗಮಂದಿರದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ ಕಾರ್ನಾಡರ ಶ್ರೇಷ್ಠ ನಾಟಕ `ತುಘಲಕ್ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದೆ.
ರಂಗಾಯಣದ ಹಿರಿಯ ಕಲಾವಿದ ಮಾಯಸಂದ್ರ ಕೃಷ್ಣಪ್ರಸಾದ್ ಈ ನಾಟಕವನ್ನು ನಿರ್ದೇಶಿಸಿರುತ್ತಾರೆ. ಎರಡು ದಿನಗಳ ಕಾಲ ನಾಟಕ ಪ್ರದರ್ಶನವಾಗಲಿದೆ. ತುಘಲಕ್ ನಾಟಕ ಕುರಿತ ಮಾಹಿತಿ ಹಾಗೂ ಟಿಕೆಟ್ಗಳಿಗಾಗಿ ಮೊ.ಸಂ. 9916212451/ 9901626701/ 9964656482 ಸಂಪರ್ಕಿಸಬಹುದು. (ಜಿ.ಕೆ,ಎಸ್.ಎಚ್)