ದೇಶಪ್ರಮುಖ ಸುದ್ದಿ

ವೀಸಾ ಹಗರಣ : ಚೀನಾ ಪ್ರಜೆಗಳಿಗೆ ವೀಸಾ ನೀಡಿದ್ದಕ್ಕಾಗಿ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ವಿಚಾರಣೆ ನಡೆಸುತ್ತಿರುವ ಸಿಬಿಐ

ದೇಶ(ನವದೆಹಲಿ),ಮೇ.26:- ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಅವರನ್ನು ಸಿಬಿಐ ವಿಚಾರಣೆ ನಡೆಸುತ್ತಿದೆ.
ಕಾರ್ತಿ ಅವರು ಗುರುವಾರ ಬೆಳಗ್ಗೆ ಸಿಬಿಐ ಕೇಂದ್ರ ಕಚೇರಿಗೆ ವಿಚಾರಣೆಗಾಗಿ ಆಗಮಿಸಿದ್ದರು. ಲಂಚ ಪಡೆದು ಚೀನಾದ ಪ್ರಜೆಗಳಿಗೆ ವೀಸಾ ಕೊಡಿಸಲು ಸಹಾಯ ಮಾಡಿದ್ದರು ಎಂಬುದು ಅವರ ಮೇಲಿರುವ ಆರೋಪ. ಆದರೆ, ಕಾರ್ತಿ ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಕಾರ್ತಿ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಈ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಅವರ ಆಪ್ತ ಸಹಾಯಕನನ್ನು ಸಿಬಿಐ ಬಂಧಿಸಿದ್ದು, ಕಾರ್ತಿ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ವಿಶೇಷ ನ್ಯಾಯಾಲಯದ ಆದೇಶದಂತೆ ಹೈಕೋರ್ಟ್ ಮತ್ತು ವಿಶೇಷ ಸಿಬಿಐ ನ್ಯಾಯಾಲಯದ ಅನುಮತಿಯೊಂದಿಗೆ ಯುಕೆ ಮತ್ತು ಯುರೋಪ್ ಪ್ರವಾಸದಲ್ಲಿದ್ದ ಕಾರ್ತಿ ಅವರು ಹಿಂದಿರುಗಿದ 16 ಗಂಟೆಗಳ ಒಳಗೆ ಸಿಬಿಐ ತನಿಖೆಗೆ ಸಹಕಾರಕ್ಕಾಗಿ ಹಾಜರಾಗಬೇಕಿತ್ತು. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: