ದೇಶಪ್ರಮುಖ ಸುದ್ದಿ

ಮಹಾರಾಷ್ಟ್ರ ಸಚಿವ ಅನಿಲ್ ಪರಬ್ ಗೆ ಸೇರಿದ 7 ಸ್ಥಳಗಳಲ್ಲಿ ಇಡಿ ದಾಳಿ

ದೇಶ(ಮುಂಬೈ),ಮೇ.26:- ಮಹಾರಾಷ್ಟ್ರದಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಲವೆಡೆ ದಾಳಿ ನಡೆಸುತ್ತಿದ್ದಾರೆ.
ಶಿವಸೇನಾ ನಾಯಕ ಹಾಗೂ ಸಚಿವ ಅನಿಲ್ ಪರಬ್ ವಿರುದ್ಧ ಇಡಿ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಇವರ ವಿರುದ್ಧ ಕೋಟ್ಯಂತರ ರೂಪಾಯಿ ಲಂಚ ಪಡೆದ ಆರೋಪವಿದೆ. ಈ ಪ್ರಕರಣದಲ್ಲಿ ಇಡಿ 7 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ಆರಂಭಿಸಿದೆ. ಜಾರಿ ನಿರ್ದೇಶನಾಲಯ ಮಹಾರಾಷ್ಟ್ರ ಸರ್ಕಾರದ ಸಚಿವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಅಡಿಯಲ್ಲಿ ಪ್ರಕರಣ ದಾಖಲಿಸಿತ್ತು. ಅದರ ನಂತರ ಈಗ ಪುಣೆ ಮತ್ತು ಮುಂಬೈನಲ್ಲಿ ಈ ಕ್ರಿಯೆ ನಡೆಯುತ್ತಿದೆ.
ಶಿವಸೇನಾ ನಾಯಕ ಅನಿಲ್ ಪರಬ್ ವಿರುದ್ಧ ಅಂಬಾನಿಗೆ ಬಾಂಬ್ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮುಂಬೈ ಪೊಲೀಸ್‌ ನ ಮಾಜಿ ಎಪಿಐ ಸಚಿನ್ ವಾಜೆ ಅವರು ಹಲವು ಆರೋಪಗಳನ್ನು ಮಾಡಿದ್ದಾರೆ. ಇದರಲ್ಲಿ ಅನಿಲ್ ಪರಬ್ ಹಲವು ಪ್ರಕರಣಗಳಲ್ಲಿ ಕೋಟಿಗಟ್ಟಲೆ ಲಂಚ ಪಡೆಯುತ್ತಿದ್ದರು ಎಂಬುದು ದೊಡ್ಡ ಆರೋಪವಾಗಿತ್ತು. ಸುಮಾರು 50 ಕೋಟಿ ವಸೂಲಿ ಮಾಡಿರುವ ಆರೋಪ ಅವರ ವಿರುದ್ಧ ಕೇಳಿ ಬಂದಿತ್ತು. ಅದೇ ವೇಳೆ ಅವರು ವರ್ಗಾವಣೆ-ಪೋಸ್ಟಿಂಗ್ ಬಗ್ಗೆ ನಿರಂತರ ವಸೂಲಿ ಮಾಡುತ್ತಿದ್ದರು ಎಂದು ಹೇಳಲಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: