ಮೈಸೂರು

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರ : ಟ್ವೀಟ್ ಮೂಲಕ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕಿಡಿ

ಮೈಸೂರು,ಮೇ.26:- ರಾಜ್ಯ ಸರ್ಕಾರದ ಪಠ್ಯಪುಸ್ತಕ ವಿವಾದ ಕುರಿತಂತೆ    ಮೂಲಕ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕಿಡಿಕಾರಿದ್ದಾರೆ.
ಅಂಬೇಡ್ಕರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಶಿಕ್ಷಣವು ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವರು ಘರ್ಜಿಸಲೇಬೇಕು, ಎಂದು ಬಾಬಾ ಸಾಹೇಬರು ಹೇಳುತ್ತಿದ್ದರು. ಹೀಗಾಗಿ ಶಿಕ್ಷಣದ ಶಕ್ತಿಯನ್ನು ಅರಿತಿರುವ ಕೋಮುವಾದಿ ದೇಶದ್ರೋಹಿಗಳು, ಹುಲಿಯ ಹಾಲಿನಂತೆ ಘರ್ಜಿಸುವ ಪ್ರೇರಣೆ ನೀಡಬಲ್ಲ ಶಿಕ್ಷಣವನ್ನೇ ಭ್ರಷ್ಟಗೊಳಿಸಲು ಹೊರಟಿದ್ದು, ಹುಲಿಯ ಹಾಲಿನ ಬದಲು, ಮೋರಿ ನೀರನ್ನು ಕುಡಿಸಲು ಹೊರಟಿದ್ದಾರೆ.
ಮೋರಿ ನೀರು ಕುಡಿದವರು, ಘರ್ಜಿಸುತ್ತಾರೋ ಇಲ್ಲವೇ ರೋಗಗ್ರಸ್ಥರಾಗಿ ನರಳುತ್ತಾರೋ ಎಂಬುದನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಕಿಡಿಕಾರಿದ್ದಾರೆ.

Leave a Reply

comments

Related Articles

error: