ಮೈಸೂರು

ಶಿಥಿಲಗೊಂಡ ಕಟ್ಟಡ ಕುಸಿತ : ತಪ್ಪಿದ ಅನಾಹುತ

ಮೈಸೂರು,ಮೇ.26:- ಮೈಸೂರಿನ ಶಿವರಾಂಪೇಟೆ ಮುಖ್ಯ ರಸ್ತೆಯಲ್ಲಿರುವ ಕಟ್ಟಡವೊಂದು ಕುಸಿದಿದೆ.

ಮಧ್ಯರಾತ್ರಿ ವೇಳೆ ಕಟ್ಟಡ ಕುಸಿದುಬಿದ್ದ ಪರಿಣಾಮ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಜನನಿಬಿಡ ಪ್ರದೇಶ ಹಾಗೂ ದಟ್ಟವಾದ ವಾಹನ ಸಂಚಾರ ಇರುವ ರಸ್ತೆಯಲ್ಲಿ ಕಟ್ಟಡ ಕುಸಿದು ಬಿದ್ದಿದೆ. ತ್ರಿಪುರ ಭೈರವಿ ಮಠದ ವೀರಾಂಜನೇಯ ದೇವಸ್ಥಾನಕ್ಕೆ ಹೊಂದಿಕೊಂಡಂತೆ ಇದ್ದ ಕಟ್ಟಡ ಶಿಥಿಲವಾಗಿತ್ತು. ಈ ಹಿಂದೆ ಕಟ್ಟಡದಲ್ಲಿ ಬಟ್ಟೆ ಅಂಗಡಿ ಇತ್ತು. ತ್ರಿಪುರ ಭೈರವಿ ಮಠ ಹಾಗೂ ಬಟ್ಟೆ ಅಂಗಡಿ ಮಾಲೀಕರ ನಡುವೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿತ್ತು. ಕಟ್ಟಡ ಶಿಥಿಲಗೊಂಡ ಪರಿಣಾಮ ವಹಿವಾಟು ಸ್ಥಗಿತಗೊಂಡಿತ್ತು. ಮಧ್ಯರಾತ್ರಿ ವೇಳೆ ಕಟ್ಟಡ ಕುಸಿದ ಬಿದ್ದ ಪರಿಣಾಮ ಅನಾಹುತ ತಪ್ಪಿದಂತಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: